alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಮಗನ ಹಾರ್ಟ್, ಲಿವರ್, ಕಣ್ಣನ್ನು ದಾನ ಮಾಡಿದ್ರು ಪೋಷಕರು

ಅನೇಕರು ಜೀವನದಲ್ಲಿ ಸಕಾರಾತ್ಮಕ ಚಿಂತನೆ ಮಾಡ್ತಾರೆ. ಅವ್ರ ಜೀವನದಲ್ಲಿ ಎಷ್ಟೇ ದುಃಖ, ಕಷ್ಟ ಬಂದ್ರೂ ಅವ್ರು ನಿರಾಶೆಗೊಳ್ಳುವುದಿಲ್ಲ. ಇದಕ್ಕೆ ಬಿಹಾರದ ನಳಂದದ ದಂಪತಿ ಉತ್ತಮ ನಿದರ್ಶನ. 19 ವರ್ಷದ ಮಗನನ್ನು ಕಳೆದುಕೊಂಡು ದುಃಖದಲ್ಲಿಯೂ ಅವ್ರು ಮಾನವೀಯತೆ ಮೆರೆದಿದ್ದಾರೆ.

ನಳಂದ ಜಿಲ್ಲೆಯ ನಿವಾಸಿ ಭೂಷಣ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಮಗನನ್ನು ಕಳೆದುಕೊಂಡ ಪಾಲಕರು ನೋವು, ಸಂಕಟದ ಮಧ್ಯೆಯೇ ಮಗನ ಅಂಗ ದಾನಕ್ಕೆ ಮುಂದಾಗಿದ್ದಾರೆ. ಭೂಷಣ್ ತಾಯಿಗೆ ಮೂತ್ರಪಿಂಡವನ್ನು ಯಾರೋ ದಾನ ಮಾಡಿದ್ದರಂತೆ. ಇದೇ ಕಾರಣಕ್ಕೆ ಆಕೆ ಬದುಕುಳಿದಿದ್ದಾಳೆ. ಅವ್ರಂತೆ ನಾವು ಕೂಡ ಇನ್ನೊಬ್ಬರ ಜೀವವುಳಿಸುವ ಪ್ರಯತ್ನ ನಡೆಸಿದ್ದೇವೆಂದು ಭೂಷಣ್ ತಂದೆ ಹೇಳಿದ್ದಾರೆ.

ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಧೀಕ್ಷಕ ಮನೀಶ್ ಮಂಡಲ್ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ತಾಯಿಯೊಬ್ಬಳು ತನ್ನ ಮಗನ ಅಂಗವನ್ನು ದಾನ ಮಾಡ್ತಿರುವುದು ಇದೇ ಮೊದಲು. ಇದು ಬೇರೆಯವರಿಗೆ ಸ್ಫೂರ್ತಿ ಎಂದು ಮನೀಶ್ ಹೇಳಿದ್ದಾರೆ. ಭೂಷಣ್ ಹೃದಯವನ್ನು ಕೊಲ್ಕತ್ತಾಗೆ, ಲಿವರನ್ನು ದೆಹಲಿಗೆ ಕಳುಹಿಸಲಾಗಿದೆ. ಕಣ್ಣನ್ನು ಇದೇ ಆಸ್ಪತ್ರೆಯಲ್ಲಿ ಇಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...