alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಊರು ಬಿಡಿಸುತ್ತಿದ್ದಾರೆ ಈ ಗ್ರಾಮದ ಜನ

haunted_tamil_nadu_village

ತಿರುವಣ್ಣಾಮಲೈನ ಥಂಡರೈ ಕಾಲೋನಿಯಲ್ಲೀಗ ಸ್ಮಶಾನ ಸದೃಶ ಸ್ಥಿತಿ. ಯಾವುದೋ ನಿಗೂಢ ಜ್ವರ ಇಡೀ ಹಳ್ಳಿಯನ್ನು ಆವರಿಸಿದೆ. ಕೇವಲ 20 ದಿನಗಳಲ್ಲಿ ಅದೆಷ್ಟೋ ಜನರನ್ನು ಬಲಿ ಪಡೆದಿದೆ. ಇದು ಕೇವಲ ಒಂದು ಖಾಯಿಲೆಯಲ್ಲ, ಯಾವುದೋ ದುಷ್ಟಶಕ್ತಿಯ ಆಟ, ಶಾಪ ಅನ್ನೋ ಭಯ ಗ್ರಾಮಸ್ಥರನ್ನು ಆವರಿಸಿದೆ.

ಇದ್ರಿಂದ ಆತಂಕಗೊಂಡ ಜನರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಊರಿನ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಹಾಗಾಗಿ ಥಂಡರೈ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ ನಲ್ಲಿ ಹಾಜರಾತಿ ಕುಸಿದಿದೆ. ಈ ಶಾಲೆಯಲ್ಲಿ 108 ಮಕ್ಕಳು ಓದುತ್ತಿದ್ದಾರೆ, ಇವರಲ್ಲಿ ಇಬ್ಬರು ಮಕ್ಕಳು ನಿಗೂಢ ಜ್ವರದಿಂದ ಮೃತಪಟ್ಟಿದ್ದಾರೆ. ದುಷ್ಟಶಕ್ತಿಯ ಭಯದಿಂದಾಗಿ ಈಗ ಕೇವಲ 19-25 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ.

ಈವರೆಗೆ ಗ್ರಾಮದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ, ಇವರಿಗೆಲ್ಲರಿಗೂ ವಾಂತಿ ಮತ್ತು ಹೊಟ್ಟೆನೋವು ಶುರುವಾಗಿತ್ತು. ಅಚ್ಚರಿ ಹುಟ್ಟಿಸೋ ವಿಚಾರ ಏನಂದ್ರೆ ಸಾವಿಗೂ ಸ್ವಲ್ಪ ಸಮಯ ಮೊದಲು ಅಸ್ವಸ್ಥತೆ ಕಾಣಿಸಿಕೊಂಡಿತ್ತು. ನಿಗೂಢ ಖಾಯಿಲೆಯಿಂದಾಗಿ ದೀಪಾವಳಿ ಹಬ್ಬದ ಆಚರಣೆ ಮೇಲೂ ಕಾರ್ಮೋಡ ಮುಸುಕಿದೆ. ಇನ್ನೊಂದ್ಕಡೆ ಅಧಿಕಾರಿಗಳು ಊರಿನ ಸ್ವಚ್ಛತೆ ಬಗ್ಗೆ ಗಮನಹರಿಸಿದ್ದಾರೆ. ಚರಂಡಿಗಳನ್ನು ಸ್ವಚ್ಛಗೊಳಿಸಿ, ರಸ್ತೆಯ ಇಕ್ಕೆಲಗಳಲ್ಲೂ ಬ್ಲೀಚಿಂಗ್ ಪೌಡರ್ ಹಾಕಲಾಗ್ತಿದೆ. ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಸಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...