alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಚಿಕಿತ್ಸೆಗೆ ಪಿಎಂ ನೆರವು ಕೇಳಿದ ಪಾಲಕರು

modi1_c4covio

ವರ್ಷದ ಬಾಲಕಿ ಆರಾಧ್ಯ ತಂದೆ ತಾಯಿ ಆರ್ಥಿಕ ಸಮಸ್ಯೆಯಿಂದಾಗಿ ಮಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿಯಲ್ಲಿದ್ದಾರೆ. ಮೂಲತಃ ಪುಣೆಯವಳಾಗಿರುವ ಆರಾಧ್ಯ  ಹೃದಯ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಅವಳಿಗೆ ಚಿಕಿತ್ಸೆ ನೀಡಲು ಹಣದ ನೆರವು ನೀಡುವಂತೆ ತಂದೆ-ತಾಯಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಜನ್ಮದಿಂದಲೂ ಆರಾಧ್ಯ ಹೃದಯದಲ್ಲಿ ಹೋಲ್ ಇದೆ. ಇದರ ಶಸ್ತ್ರಚಿಕಿತ್ಸೆ ದುಬಾರಿ. ಗುರುವಾರ ಪಿಎಂಗೆ ಪತ್ರಬರೆದಿರುವ ತಂದೆ ಆರಾಧ್ಯ ಬಳಲುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ಹಣದ ನೆರವು ನೀಡುವಂತೆ ಹೇಳಿದ್ದಾರೆ. 2016ರಲ್ಲಿ ವೈಶಾಲಿ ಎಂಬ ಆರು ವರ್ಷದ ಬಾಲಕಿಗೆ ಪಿಎಂ ನೆರವು ನೀಡಿದ್ದರು. ಆರಾಧ್ಯಗೆ ಕೂಡ ನೆರವು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಆರಾಧ್ಯ ಚಿಕ್ಕಪ್ಪ ಜಾಗೃತಿ ಅಭಿಯಾನವನ್ನು ಶುರುಮಾಡಲಿದ್ದಾರೆ. ಮಾರ್ಚ್ 19ರಂದು ರ್ಯಾಲಿ ನಡೆಸಲಿದ್ದಾರೆ. ಆರಾಧ್ಯಗೆ ದೇಶದ ಜನ ಬೆಂಬಲ ನೀಡಲಿದ್ದಾರೆಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ ಚಿಕ್ಕಪ್ಪ. ಸದ್ಯ ಆರಾಧ್ಯ ಮನೆಯಲ್ಲಿದ್ದು, ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಲಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...