alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯನ ತಬ್ಬಿಕೊಂಡ ಶಿಕ್ಷಕಿ, ಕುದ್ದು ಹೋದ ಪ್ರಿಯಕರ

car-cahennai

ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ ಕಾರು ಹರಿಸಿ ಶಿಕ್ಷಕಿಯನ್ನು ಕೊಲೆ ಮಾಡಿದ ಘಟನೆ ಚೆನ್ನೈನ ಅಣ್ಣಾನಗರದಲ್ಲಿ ನಡೆದಿದೆ.

ಇಬ್ಬರು ಮಕ್ಕಳ ತಾಯಿಯಾಗಿರುವ ಪೊಲ್ಲಾಚಿಯ ಸರ್ಕಾರಿ ಶಾಲೆಯ ಶಿಕ್ಷಕಿ ನಿವೇದಾ ಕೊಲೆಯಾದವರು. ವಿಚ್ಛೇದಿತೆಯಾಗಿದ್ದ ನಿವೇದಾ ತನ್ನ ಪ್ರಿಯಕರ ಇಳಯರಾಜನಿಂದ ಜನನಿಬಿಡ ಪ್ರದೇಶದಲ್ಲಿಯೇ ಕೊಲೆಯಾಗಿದ್ದಾಳೆ. ಇಳಯರಾಜನೊಂದಿಗೆ ಗೆಳೆತನ ಹೊಂದಿದ್ದ ನಿವೇದಾ ಕೆಲದಿನಗಳಿಂದ ಗಣಪತಿ ಎಂಬುವವನೊಂದಿಗೆ ಹೆಚ್ಚಾಗಿ ಬೆರೆಯುತ್ತಿದ್ದಳು.

ಆತನೊಂದಿಗೆ ಫೇಸ್ ಬುಕ್ ನಲ್ಲಿ ಯಾವಾಗಲೂ ಚಾಟ್ ಮಾಡುತ್ತಿದ್ದಳು. ಈಕೆಗಾಗಿ ದುಡ್ಡು ಸುರಿದಿದ್ದ ಇಳಯರಾಜನಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ.

ತನ್ನ ಹಣವನ್ನು ವಾಪಸ್ ಕೊಡುವಂತೆ ಒತ್ತಾಯಿಸಿದ್ದಾನೆ. ಅಣ್ಣಾನಗರಕ್ಕೆ ನಿವೇದಾ ಮತ್ತು ಗಣಪತಿಯನ್ನು ಕರೆಸಿಕೊಂಡು ಈಗಲೇ ಹಣ ಕೊಡಿ ಎಂದು ದಬಾಯಿಸಿದ್ದಾನೆ.

ಆದರೆ, ಆತನ ಮಾತಿಗೆ ಸೊಪ್ಪು ಹಾಕದ ಗಣಪತಿ, ನಿವೇದಾಳನ್ನು ಬೈಕ್ ನಲ್ಲಿ  ಕೂರಿಸಿಕೊಂಡು ಅಲ್ಲಿಂದ ಹೊರಟಿದ್ದಾನೆ. ಬೈಕ್ ನಲ್ಲಿ ಗಣಪತಿಯನ್ನು ತಬ್ಬಿಕೊಂಡು ನಿವೇದಾ ಕುಳಿತಿದ್ದನ್ನು ಕಂಡ ಇಳಯರಾಜ ಕುದ್ದು ಹೋಗಿದ್ದು, ಕಾರಿನಲ್ಲಿ ಅವರನ್ನು ಹಿಂಬಾಲಿಸಿ ಡಿಕ್ಕಿ ಹೊಡೆಸಿದ್ದಾನೆ.

ನಿವೇದಾ ಮೇಲೆ ಕಾರು ಹರಿದು ಮೃತಪಟ್ಟಿದ್ದು, ಗಣಪತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಫೇಸ್ ಬುಕ್ ಕಾರಣದಿಂದ ಟ್ರಯಾಂಗಲ್ ಲವ್ ಸ್ಟೋರಿ ದುರಂತ ಅಂತ್ಯ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...