alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನಗೇಡಿ ಕೆಲಸ ಮಾಡ್ತಿದ್ದ ಪ್ಯಾರಾ ಸ್ವಿಮ್ಮರ್ ಗೆ 3 ವರ್ಷ ನಿಷೇಧ

ಕದ್ದುಮುಚ್ಚಿ ಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪ್ಯಾರಾ ಸ್ವಿಮ್ಮರ್ ಪ್ರಶಾಂತ ಕರ್ಮಾಕರ್ ನನ್ನು ಭಾರತದ ಪ್ಯಾರಾಲಂಪಿಕ್ ಸಮಿತಿ 3 ವರ್ಷಗಳ ಕಾಲ ವಜಾ ಮಾಡಿದೆ. ಕಳೆದ ವರ್ಷ ಜೈಪುರದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಸ್ಮಿಮ್ಮಿಂಗ್ ಚಾಂಪಿಯನ್ಷಿಪ್ ನಲ್ಲಿ ಪ್ರಶಾಂತ ಸಿಕ್ಕಿಬಿದ್ದಿದ್ದ.

ಅರ್ಜುನ ಪ್ರಶಸ್ತಿ ವಿಜೇತ ಸ್ವಿಮ್ಮರ್ ಜೊತೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಸಹ ಕರ್ಮಾಕರ್ ವಿರುದ್ಧ ಲಿಖಿತ ದೂರು ದಾಖಲಾಗಿತ್ತು. ಈವೆಂಟ್ ನಲ್ಲಿ ತನ್ನ ಸ್ನೇಹಿತನೊಬ್ಬನಿಗೆ ಕ್ಯಾಮರಾ ಕೊಟ್ಟು, ಈಜುಗಾರ್ತಿಯರ ವಿಡಿಯೋ ಶೂಟಿಂಗ್ ಮಾಡುವಂತೆ ಕರ್ಮಾಕರ್ ಸೂಚಿಸಿದ್ದ.

ವಿಡಿಯೋ ರೆಕಾರ್ಡ್ ಮಾಡ್ತಿದ್ದಾಗ ಸಿಕ್ಕಿಬಿದ್ದಿದ್ದ ಆತ ಪಿಸಿಐ ಅಧ್ಯಕ್ಷರ ಸೂಚನೆ ಮೇರೆಗೆ ಸುಮ್ಮನಾಗಿದ್ದ. ಆದ್ರೆ ನಂತರ ಖುದ್ದು ಕರ್ಮಾಕರ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಅದನ್ನು ಡಿಲೀಟ್ ಮಾಡುವಂತೆ ಸೂಚಿಸಿದ್ರೂ ಕರ್ಮಾಕರ್ ಒಪ್ಪಿರಲಿಲ್ಲ.

ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ರು. ವಿಡಿಯೋ ಡಿಲೀಟ್ ಮಾಡಲು ಸಮ್ಮತಿಸಿದ ಬಳಿಕ ಬಿಟ್ಟು ಕಳುಹಿಸಿದ್ರು. ಇದೀಗ ಮೂರು ವರ್ಷಗಳ ಕಾಲ ಕರ್ಮಾಕರ್ ನನ್ನು ವಜಾ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...