alex Certify
ಕನ್ನಡ ದುನಿಯಾ       Mobile App
       

Kannada Duniya

ಪನ್ನೀರ್ ಸೆಲ್ವಂ ಭದ್ರತೆಗೆ ಬೌನ್ಸರ್ಸ್ ನೇಮಕ

opsತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಾಸವಾಗಿರುವ ಪೋಯಸ್ ಗಾರ್ಡನ್ ನಿವಾಸ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ವಾಸವಾಗಿರುವ ಗ್ರೀನ್ ವೇಸ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಈ ಮಧ್ಯೆ ಪನ್ನೀರ್ ಸೆಲ್ವಂ ತಮ್ಮ ಭದ್ರತೆಗೆ ಖಾಸಗಿಯಾಗಿ 12 ಮಂದಿ ಬೌನ್ಸರ್ಸ್ ಗಳನ್ನು ನೇಮಿಸಿಕೊಂಡಿದ್ದಾರೆಂದು ಹೇಳಲಾಗಿದೆ. ಇಂದು ಬೆಳಿಗ್ಗೆ ಪನ್ನೀರ್ ಸೆಲ್ವಂರ ನಿವಾಸಕ್ಕೆ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಹಲವು ಎಐಎಡಿಎಂಕೆ ನಾಯಕರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ಗುರುವಾರದಂದು ಪನ್ನೀರ್ ಸೆಲ್ವಂ ಹಾಗೂ ಶಶಿಕಲಾರನ್ನು ರಾಜಭವನದಲ್ಲಿ ಭೇಟಿಯಾಗಿದ್ದ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ ರಾವ್ ಇಂದು ಸಂಜೆಯೊಳಗಾಗಿ ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆನ್ನಲಾಗಿದ್ದು, ಪನ್ನೀರ್ ಸೆಲ್ವಂರಿಗೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸೂಚಿಸುವರೋ ಅಥವಾ ಶಾಸಕರ ಬೆಂಬಲ ಪರಿಗಣಿಸಿ ಶಶಿಕಲಾರಿಗೆ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನ ನೀಡುತ್ತಾರೋ ಎಂಬ ಕುತೂಹಲ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...