alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಮಾಹಿತಿಗೆ ಬಲಿಯಾಯ್ತು ಅಮಾಯಕಿ ಜೀವ

500-and-1000-rs-notesಕಪ್ಪು ಹಣ ಹೊಂದಿದವರನ್ನು ಮಟ್ಟ ಹಾಕಲು 500 ಹಾಗೂ 1000 ರೂ. ನೋಟುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಬ್ಯಾಂಕ್ ಗಳಲ್ಲಿ ಗುರುವಾರದಿಂದ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಎರಡು ದಿನಗಳಿಂದ ಬಂದ್ ಆಗಿದ್ದ ಎಟಿಎಂ ಗಳೂ ಇಂದಿನಿಂದ ಕಾರ್ಯ ಆರಂಭಿಸಿದ್ದು, 500 ಹಾಗೂ 1000 ರೂ. ನೋಟು ಹೊರತುಪಡಿಸಿ ಇತರೆ ನೋಟುಗಳು ಲಭ್ಯವಾಗುತ್ತಿವೆ. ಈ ಮಧ್ಯೆ 500 ಮತ್ತು 1000 ನೋಟುಗಳು ಸಂಪೂರ್ಣವಾಗಿ ಮೌಲ್ಯ ಕಳೆದುಕೊಂಡಿವೆ ಎಂದು ಕೆಲವರು ಹೇಳಿದ ಮಾತನ್ನು ನಂಬಿ ಅಮಾಯಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷದ ಕಂದಕೂರಿ ವಿನೋದಾ ಎಂಬವರು ತಮ್ಮ 12 ಎಕರೆ ಜಮೀನನ್ನು ಮಾರಿ ಅದರಿಂದ ಬಂದ 56.40 ಲಕ್ಷ ರೂ. ಹಣದಲ್ಲಿ ಅನಾರೋಗ್ಯಕ್ಕೊಳಗಾಗಿದ್ದ ತಮ್ಮ ಪತಿಯ ಚಿಕಿತ್ಸೆಗೆ 2 ಲಕ್ಷ ರೂ. ವೆಚ್ಚ ಮಾಡಿ ಉಳಿದ ಹಣವನ್ನು ಮಗಳ ಮದುವೆಗೆ ಹಾಗೂ ಸ್ವಲ್ಪ ಜಮೀನನ್ನು ಕೊಳ್ಳುವ ಸಲುವಾಗಿ ತೆಗೆದಿರಿಸಿದ್ದರು. ಈ ಹಣವೆಲ್ಲವೂ 500 ಹಾಗೂ 1000 ರೂ. ನೋಟುಗಳಾಗಿದ್ದು, ಇವುಗಳ ಚಲಾವಣೆ ಮೇಲೆ ನಿಷೇಧ ಹೇರುತ್ತಿದ್ದಂತೆಯೇ ಗ್ರಾಮದ ಕೆಲವರು, ಇನ್ನು ಮುಂದೆ ಈ ಹಣವೆಲ್ಲವೂ ನಿರುಪಯುಕ್ತ. ಅವು ಕೇವಲ ಕಾಗದದ ಚೂರುಗಳಷ್ಟೇ ಎಂದಿದ್ದಾರೆ. ಅಲ್ಲದೇ ಕೆಲ ಸಂಬಂಧಿಕರು ತಮ್ಮನ್ನು ಸಂಪರ್ಕಿಸದೆ ಜಮೀನು ಮಾರಿದ್ದಕ್ಕೆ ಆಕ್ಷೇಪಿಸಿ ಇನ್ನು ಈ 500 ಹಾಗೂ 1000 ರೂ. ನೋಟುಗಳು ಹರಿದು ಬಿಸಾಡಬೇಕಷ್ಟೇ ಎಂದೆಲ್ಲಾ ಹೇಳಿದ್ದಾರೆ. ಇದರಿಂದ ಎದೆಯೊಡೆದಂತಾದ ವಿನೋದಾ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 500 ಹಾಗೂ 1000 ರೂ. ನೋಟುಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿದ್ದರೂ ಕೆಲವರು ನೀಡಿದ ತಪ್ಪು ಮಾಹಿತಿಯಿಂದಾಗಿ ಅಮಾಯಕಿಯ ಜೀವ ಬಲಿಯಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...