alex Certify
ಕನ್ನಡ ದುನಿಯಾ       Mobile App
       

Kannada Duniya

ಅನಿರೀಕ್ಷಿತ ಅತಿಥಿಯನ್ನು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಕೋತಿಯೊಂದು ಕಾಣಿಸಿಕೊಂಡಿದೆ. ವಿಶೇಷ ಅತಿಥಿಯನ್ನು ಕಂಡು ಪ್ರಯಾಣಿಕರಿಗೆ ದಿಗಿಲಾಗಿದೆ. ಅಜಾದ್ಪುರ್ ಮೆಟ್ರೋ ಸ್ಟೇಷನ್ ನಲ್ಲಿ ಈ ಕೋತಿಯ ದರ್ಶನವಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು.

ಸೋಮವಾರ 11.30 ರ ಸುಮಾರಿಗೆ ಕೋತಿ, ಮೆಟ್ರೋ ನಿಲ್ದಾಣದಲ್ಲಿ ಪ್ರತ್ಯಕ್ಷವಾಗಿದೆ. ಜನನಿಬಿಡ ಪ್ರದೇಶವಾದ ಅಜಾದ್ಪುರ್ ಮೆಟ್ರೋ ಸ್ಟೇಷನ್ ನಲ್ಲಿ ಕೋತಿ ಕಾಣುತ್ತಿದ್ದಂತೆ ಜನ ಕಂಗಾಲಾಗಿದ್ದಾರೆ. ಕೋತಿ ಎಸ್ಕಲೇಟರ್ ನಲ್ಲಿ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.

ಕೋತಿಯಿಂದ ಯಾವುದೇ ಹಾನಿಯಾಗಿಲ್ಲ. ಸಿಐಎಸ್ಎಫ್ ಹಾಗೂ ಡಿಎಂಆರ್ಸಿ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ, ಕೋತಿಯನ್ನು ಮೆಟ್ರೋ ಆವರಣದಿಂದ ಹೊರ ಹಾಕಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗ ಕೋತಿ ಮೆಟ್ರೋದಲ್ಲಿಯೇ ಅಡ್ಡಾಡುತ್ತಿತ್ತು. ಕೋತಿ ಒಂದು ಬೋಗಿಯಿಂದ ಮತ್ತೊಂದು ಬೋಗಿಗೆ ಹೋಗುವ ದೃಶ್ಯಗಳು ಸಕತ್ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...