alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಹತ್ಯೆಗೈದ ಪತಿಯ ಹೆಣವನ್ನೂ ನೋಡಲಿಲ್ಲ ಪತ್ನಿ

ತನ್ನ ಸಹೋದರ ಸಂಬಂಧಿಯ ಮೂವರು ಮಕ್ಕಳನ್ನು ಪಾಪಿಯೊಬ್ಬ ಹತ್ಯೆಗೈದ ಘಟನೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪಂಚಕುಲದಲ್ಲಿ ನಡೆದಿತ್ತು. ಈ ಘಟನೆ ಪಂಚಕುಲದ ಸಾರ್ಸಾ  ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತಲ್ಲದೇ ಆರೋಪಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ತನ್ನ ಸಹೋದರ ಸಂಬಂಧಿ ಸೋನು ಮಲ್ಲಿಕ್ ರ ಮೂವರು ಮಕ್ಕಳನ್ನು ಮೋರ್ನಿ ಅರಣ್ಯದಲ್ಲಿ ಹತ್ಯೆ ಮಾಡಿದ್ದ ಜಗದೀಪ್ ಮಲ್ಲಿಕ್ ನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಆತನನ್ನು ಕುರುಕ್ಷೇತ್ರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದರು.

ಕಾರಾಗೃಹದಲ್ಲೇ ಜಗದೀಪ್ ಮಲ್ಲಿಕ್ ಆತ್ಮಹತ್ಯೆಗೆ ಶರಣಾಗಿದ್ದು, ಆತನ ಪತ್ನಿ ಹಾಗೂ ತಾಯಿ ಸಹ ಮೃತನ ದೇಹವನ್ನು ಪಡೆಯಲು ಮುಂದಾಗಿರಲಿಲ್ಲ. ಮೃತನ ವಾರಸುದಾರರಿಗಾಗಿ 72 ಗಂಟೆಗಳ ಕಾಲ ಕಾದ ಪೊಲೀಸರು ಯಾರೂ ಮುಂದೆ ಬಾರದ ಕಾರಣ ವಿಧಿಯಿಲ್ಲದೆ ಟ್ರಸ್ಟ್ ಒಂದರ ನೆರವಿನೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಿದ್ದಾರೆ. ನಿಯಮದನ್ವಯ 72 ಗಂಟೆಗಳ ಕಾಲ ಮೃತನ ವಾರಸುದಾರರು ಬರುತ್ತಾರೆಂಬ ಕಾರಣಕ್ಕೆ ಕಾದಿದ್ದು, ಯಾರೂ ಬಾರದ ಕಾರಣ ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ ಎಂದು ಕುರುಕ್ಷೇತ್ರ ನಗರ ಠಾಣೆಯ ಉಸ್ತುವಾರಿ ಅಧಿಕಾರಿ ಮಲ್ಕೀತ್ ಸಿಂಗ್ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...