alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ವಿಡಿಯೋ ವೈರಲ್ ಮಾಡಿದ ಯುವಕರಿಗೆ ಸಿಕ್ತು ಇಂಥ ಶಿಕ್ಷೆ

ಹರ್ಯಾಣದ ಮೇವಾತ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದ ದುಷ್ಟರಿಗೆ ಸ್ಥಳೀಯರು ಬುದ್ದಿ ಕಲಿಸಿದ್ದಾರೆ. 6 ಯುವಕರ ಮುಖಕ್ಕೆ ಕಪ್ಪು ಬಣ್ಣ ಬಳಿದ ಪಂಚಾಯತಿ ಸದಸ್ಯರು ಚಪ್ಪಲಿ ಏಟು ನೀಡಿದ್ದಾರೆ. ದುಷ್ಟರಿಗೆ 51 ಸಾವಿರ ರೂಪಾಯಿ ದಂಡ ಕೂಡ ವಿಧಿಸಿದ್ದಾರೆ.

ಜನವರಿ 21ರಂದು 6 ಯುವಕರು ಯುವತಿಯರ ವಿಡಿಯೋ ಮಾಡಿದ್ದರು. ಕೊಳದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಲ್ಲದೆ ಅಶ್ಲೀಲ ಕಮೆಂಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಯುವಕರ ವಿರುದ್ಧ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಕೋಪಗೊಂಡಿದ್ದರು.

6 ಹಳ್ಳಿಯ ಜನರು ಒಂದಾಗಿ ಪಂಚಾಯತಿ ಕರೆದು ಯುವಕರಿಗೆ ಬುದ್ಧಿ ಕಲಿಸುವ ನಿರ್ಧಾರಕ್ಕೆ ಬಂದ್ರು. ಮುಖಕ್ಕೆ ಕಪ್ಪು ಬಣ್ಣ ಬಳಿದು ಚಪ್ಪಲಿ ಏಟು ನೀಡಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...