alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯರು ಮೊಬೈಲ್ ಬಳಸಿದರೆ ಕಸ ಗುಡಿಸುವ ಶಿಕ್ಷೆ

sweep 18

ಈಗೇನಿದ್ದರೂ ಸ್ಮಾರ್ಟ್ ಯುಗ. ಬಹುತೇಕರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳಿರುತ್ತವೆ. ಅದರಲ್ಲಿಯೂ ಯುವಕ, ಯುವತಿಯರು ಹೆಚ್ಚಾಗಿ ಫೋನ್ ಬಳಸುತ್ತಾರೆ. ಹೀಗೆ ಫೋನ್ ಬಳಕೆ ಕಾರಣದಿಂದ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಗುಜರಾತ್ ಗ್ರಾಮವೊಂದರಲ್ಲಿ ಮದುವೆಯಾಗದ ಹೆಣ್ಣುಮಕ್ಕಳು ಮೊಬೈಲ್ ಬಳಸಲು ನಿಷೇಧ ಹೇರಲಾಗಿದೆ.

ಇದೇ ಮಾದರಿಯನ್ನು ಅನುಸರಿಸಿರುವ ಉತ್ತರಪ್ರದೇಶ ಆಲೀಘರ್ ಜಿಲ್ಲೆಯ ಗ್ರಾಮದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರು ಮೊಬೈಲ್ ಬಳಸಲು ನಿಷೇಧ ಹೇರಲಾಗಿದೆ. ಬಸೂಲಿ ಗ್ರಾಮದ ಪಂಚಾಯತ್ ಇಂತಹ ತೀರ್ಮಾನ ಕೈಗೊಂಡಿದ್ದು, ಒಂದು ವೇಳೆ ಯುವತಿಯರು ಮೊಬೈಲ್ ಬಳಸಿದರೆ ಅವರ ಕುಟುಂಬದವರು ಗ್ರಾಮದ ರಸ್ತೆಯಲ್ಲಿ ಕಸ ಗುಡಿಸಬೇಕು. ಮೊಬೈಲ್ ಬಳಕೆಯಿಂದ ಯುವತಿಯರು ಹಾಳಾಗುತ್ತಾರೆ ಎಂಬ ಕಾರಣಕ್ಕೆ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ಅಲ್ಲದೇ, ಪಂಚಾಯಿತಿ ಮುಖಂಡರು ಮತ್ತೊಂದು ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ. ಯಾರಾದರೂ ಮದ್ಯ ಸೇವಿಸಿರುವುದು ಗೊತ್ತಾದರೆ ದಂಡ ವಿಧಿಸಲಾಗುವುದು. ಇದರ ಬಗ್ಗೆ ನಿಗಾ ವಹಿಸಲು ಸ್ವಯಂಸೇವಕರ ತಂಡವೊಂದನ್ನು ನಿಯೋಜಿಸಲಾಗಿದೆ.

ಮಾಧ್ಯಮಗಳಲ್ಲಿ ಈ ಕುರಿತಂತೆ ವರದಿಯಾದ ನಂತರ ಪ್ರತಿಕ್ರಿಯೆ ನೀಡಿರುವ ಆಲಿಘರ್ ಸಹಾಯಕ ಜಿಲ್ಲಾಧಿಕಾರಿ ಸಂಜಯ್ ಚವ್ಹಾಣ್, ಒತ್ತಾಯ ಪೂರ್ವಕವಾಗಿ ಯಾವುದೇ ನಿರ್ಬಂಧಗಳನ್ನು ಹೇರುವಂತಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ, ಗ್ರಾಮದ ಬಹುತೇಕರು ಪಂಚಾಯಿತಿ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...