alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರೇಮಿಯನ್ನು ಉಡಾಯಿಸಲು ಬಾಂಬ್ ಇಟ್ಟಿದ್ದ ಮಹಿಳೆ

bombಹರಿಯಾಣದ ಪಲ್ವಾಲ್ ಜಿಲ್ಲೆಯ 35 ವರ್ಷದ ಮಹಿಳೆಯೊಬ್ಬಳು ತನಗೆ ಕೈಕೊಟ್ಟಿದ್ದ ಬಾಯ್ ಫ್ರೆಂಡ್ ಅನ್ನೇ ಬಾಂಬ್ ಇಟ್ಟು ಉಡಾಯಿಸಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಳು. ಇದಕ್ಕಾಗಿ ಆರತಿ ಎಂಬ ಈ ಮಹಿಳೆ ಇನ್ನೋರ್ವ ಮಾಜಿ ಪ್ರೇಮಿ ಪ್ರದೀಪ್ ಅಲಿಯಾಸ್ ದರೋಗಾನ ಸಹಾಯ ಪಡೆದುಕೊಂಡಿದ್ದಾಳೆ.

ಮತ್ತೊಂದು ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಆರತಿ ಈ ವಿಷಯವನ್ನು ಬಾಯ್ಬಿಟ್ಟಿದ್ದಾಳೆ. ಪ್ರದೀಪ್ ನ ಸ್ನೇಹಿತ ಪಟಾಕಿಗಳನ್ನು ತಯಾರಿಸ್ತಾ ಇದ್ದ. ಆತನ ಬಳಿ ಕಚ್ಚಾವಸ್ತುಗಳನ್ನು ತೆಗೆದುಕೊಂಡು ಆರತಿ ಹಾಗೂ ಪ್ರದೀಪ್, ನಾಡ ಬಾಂಬ್ ತಯಾರಿಸಿದ್ದಾರೆ. ಅದರಲ್ಲಿ ಪಟಾಕಿ ಪೌಡರ್, ಉಗುರುಗಳು, ಕಲ್ಲುಗಳನ್ನು ಹಾಕಿ ಶಮ್ಶಾಬಾದ್ ಕಾಲೋನಿಯಲ್ಲಿರುವ ಆರತಿಯ ಮಾಜಿ ಪ್ರೇಮಿಯ ಮನೆಯಲ್ಲಿ ಅಡಗಿಸಿಟ್ಟಿದ್ದಾರೆ. ಅದೃಷ್ಟವಶಾತ್ ಬಾಂಬ್ ಸ್ಫೋಟಗೊಳ್ಳುವಷ್ಟರಲ್ಲಿ ಈ ರಹಸ್ಯ ಬಯಲಾಗಿದ್ದು, ಪೊಲೀಸರು ಅವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. 15 ದಿನಗಳ ಹಿಂದೆ ಬಾಂಬ್ ಗಳನ್ನು ಇಡಲಾಗಿತ್ತು. ಈ ಪ್ಲಾನ್ ಗೆ ಬಲಿಯಾಗುವುದರಲ್ಲಿದ್ದ ರಾಕೇಶ್ ನನ್ನು ಆರತಿ ಭೇಟಿಯಾಗಿದ್ದು 2010 ರಲ್ಲಿ. ಮೂವರು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ರಾಕೇಶ್, ಆರತಿ ಜೊತೆಗೆ ಇರಲಾರಂಭಿಸಿದ್ದ.

6 ವರ್ಷಗಳ ನಂತರ ಮತ್ತೆ ತನ್ನ ಕುಟುಂಬವನ್ನು ಸೇರಿಕೊಂಡ. ರಾಕೇಶ್ ತನ್ನನ್ನು ಬಿಟ್ಟು ಹೋಗಲು ಕಾರಣ ಆತನ ಸಂಬಂಧಿ ಬಾಬು ಲಾಲ್ ಅನ್ನೋದು ಆರತಿಯ ಆರೋಪ. ಇದೇ ಕೋಪದಲ್ಲಿ ಆಕೆ ಪ್ರದೀಪ್ ಜೊತೆ ಸೇರಿ ಅಕ್ಟೋಬರ್ 3ರಂದು ಬಾಬುಲಾಲ್ ನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಪೊಲೀಸರೆದುರು ತಪ್ಪೊಪ್ಪಿಕೊಂಡಿರುವ ಆರತಿ ಮತ್ತು ಪ್ರದೀಪ್, ರಾಕೇಶ್ ಮನೆಯಲ್ಲೂ ಬಾಂಬ್ ಇಟ್ಟಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇವರಿಬ್ಬರೂ ಅಪರಾಧ ಜಗತ್ತಿಗೆ ಕಾಲಿಟ್ಟಿರೋದು ಇದೇ ಮೊದಲೇನಲ್ಲ. ಇವರ ವಿರುದ್ಧ ಕೊಲೆ, ಅಪಹರಣ, ದರೋಡೆ ಹೀಗೆ ಹಲವು ಆರೋಪಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...