alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಲಿವುಡ್ ಸಂಗೀತ ನಿರ್ದೇಶಕನ ಮೇಲೆ ಹಲ್ಲೆ

Sasipreetamಹಣಕಾಸು ವ್ಯವಹಾರದ ಸಂಬಂಧ ಟಾಲಿವುಡ್ ಸಂಗೀತ ನಿರ್ದೇಶಕ ಶಶಿ ಪ್ರೀತಮ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೈದರಾಬಾದಿನ ಮಾದಪುರ್ ಏರಿಯಾದಲ್ಲಿ ಹಲ್ಲೆ ನಡೆದಿದ್ದು, ಶಶಿ ಪ್ರೀತಮ್ ನೆರೆ ಮನೆಯ ನಿವಾಸಿ ಭಾನುಪ್ರಸಾದ್ ಹಲ್ಲೆ ನಡೆಸಿದವನಾಗಿದ್ದಾನೆ. 2012 ರಲ್ಲಿ ಭಾನುಪ್ರಸಾದ್, ಶಶಿ ಪ್ರೀತಮ್ ಅವರಿಗೆ 1.50 ಲಕ್ಷ ರೂ. ಗಳನ್ನು ನೀಡಿದ್ದನೆಂದು ಹೇಳಲಾಗಿದ್ದು, ಹಣ ವಾಪಾಸ್ ನೀಡದ ಕಾರಣ ಈ ಕೃತ್ಯವೆಸಗಿದ್ದಾನೆ.

ಹಣದ ವಿಚಾರವಾಗಿ ಮನೆ ಮುಂದೆಯೇ ಇಬ್ಬರ ನಡುವೆ ವಾಗ್ವಾದವಾಗಿದ್ದು, ಬಳಿಕ ಭಾನುಪ್ರಸಾದ್, ಶಶಿ ಪ್ರೀತಮ್ ಅವರ ಮುಖಕ್ಕೆ ಗುದ್ದಿದ್ದಾನೆ. ಇದರಿಂದಾಗಿ ಶಶಿ ಪ್ರೀತಮ್ ಮುಖದ ಮೇಲೆ ಆಳವಾದ ಗಾಯವಾಗಿದೆ. ಈಗವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಾನುಪ್ರಸಾದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...