alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ನಡೀತು ಪಾಕ್ ಬಾಲಕನಿಗೆ ಚಿಕಿತ್ಸೆ

pak2_750_1500424170_618x347

ಪಾಕಿಸ್ತಾನದಲ್ಲಿ ವಾಸವಾಗಿರುವ ಮೂರು ತಿಂಗಳ ರೋಹನ್ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಪಾಕಿಸ್ತಾನದಲ್ಲಿ ರೋಹನ್ ಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಭಾರತದಲ್ಲಿ ಮಗನಿಗೆ ಚಿಕಿತ್ಸೆ ನೀಡಬೇಕೆಂಬುದು ರೋಹನ್ ತಂದೆ ಆಸೆಯಾಗಿತ್ತು. ಆದ್ರೆ ವೈದ್ಯಕೀಯ ವೀಸಾ ಸಿಗುವುದು ಸುಲಭವಾಗಿರಲಿಲ್ಲ.

ರೋಹನ್ ತಂದೆ ಕನ್ವಾಲ್ ಸಿದ್ಧಿಕ್ಕಿ ಸಾಮಾಜಿಕ ಜಾಲತಾಣದ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಸುಷ್ಮಾ ತಕ್ಷಣ ವೈದ್ಯಕೀಯ ವೀಸಾ ಕೊಡಿಸಿದ್ದಾರೆ. ಇದ್ರ ನಂತ್ರ ರೋಹನ್ ನನ್ನು ನೋಯ್ಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ರೋಹನ್ ಆರೋಗ್ಯವಾಗಿದ್ದು ಇಂದು ಪಾಕಿಸ್ತಾನಕ್ಕೆ ವಾಪಸ್ ಹೋಗ್ತಿದ್ದಾನೆ. ರೋಹನ್ ಗುಣಮುಖನಾಗಿದ್ದನ್ನು ನೋಡಿದ ತಂದೆ ಕಣ್ಣೀರಿಟ್ಟಿದ್ದಾರೆ. ಭಾರತಕ್ಕೆ ಧನ್ಯವಾದ ಹೇಳಿದ ಕನ್ವಾಲ್, ಬೇರೆಯವರ ಕಣ್ಣಿಗೆ ಭಾರತ-ಪಾಕ್ ಶತ್ರಗಳಂತೆ ಕಾಣಬಹುದು. ಆದ್ರೆ ಎರಡೂ ದೇಶದ ಜನರ ನಡುವೆ ಉತ್ತಮ ಸಂಬಂಧವಿದೆ ಎಂದಿದ್ದಾರೆ.

ರೋಹನ್ ಚಿಕಿತ್ಸೆ ಸುಲಭವಾಗಿರಲಿಲ್ಲವಂತೆ. ಆದ್ರೆ ಹಾರ್ಡ್ ವರ್ಕ್ ನಿಂದ ಎಲ್ಲ ಸಾಧ್ಯವಾಯ್ತು ಎಂದು ವೈದ್ಯರ ತಂಡ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...