alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ರೇಷನ್ ಕಾರ್ಡ್, ವೋಟರ್ ಐಡಿ ಹೊಂದಿದ್ದ ಪಾಕಿಸ್ತಾನಿ ಅರೆಸ್ಟ್

kabul-27

ಭಾರತದಲ್ಲಿ ಮನೆ-ಅಂಗಡಿ ಜೊತೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದ ಪಾಕಿಸ್ತಾನಿ ನಾಗರೀಕನೊಬ್ಬ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ. 61 ವರ್ಷದ ಪಾಕಿಸ್ತಾನಿಯನ್ನು ಗಾಜಿಯಾಬಾದ್ ನ ಮಸ್ಸೂರಿ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ. ಮಹಮ್ಮದ್ ಯೂನಸ್ ದೀರ್ಘಕಾಲದ ವೀಸಾ ಪಡೆದು ಇಲ್ಲಿ ನೆಲೆಸಿದ್ದ ಎನ್ನಲಾಗಿದೆ.

ಯೂನಸ್ 1956 ರಲ್ಲಿ ದೀರ್ಘಕಾಲದ ವೀಸಾ ಪಡೆದು ಭಾರತಕ್ಕೆ ಬಂದಿದ್ದಾನೆ. ಎರಡು ಗಂಡು ಮಕ್ಕಳ ಜೊತೆ ಆತ ನೆಲೆಸಿದ್ದು, ಮನೆ-ಅಂಗಡಿ ಎಲ್ಲ ಮಾಡಿದ್ದಾನೆ. ಇಷ್ಟೇ ಅಲ್ಲ ವೋಟರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಕೂಡ ಆತನ ಬಳಿ ಇದೆ. ವೀಸಾವನ್ನು ನವೀಕರಣ ಮಾಡ್ತಾ ಭಾರತದಲ್ಲಿ ನೆಲೆ ನಿಂತಿರುವ ಯೂನಸ್ ಮೂಲತಃ ಕರಾಚಿಯವನು.

ಕಾನೂನಿನ ಪ್ರಕಾರ ದೀರ್ಘ ಕಾಲದ ವೀಸಾ ಪಡೆದಿರುವ ವ್ಯಕ್ತಿಗಳು ಭಾರತದ ನೆಲದಲ್ಲಿ ಸ್ವಂತ ಆಸ್ತಿ ಮಾಡುವಂತಿಲ್ಲ. ಹಾಗೆ ಭಾರತ ಸರ್ಕಾರದಿಂದ ಭಾರತದ ನಾಗರೀಕರಿಗೆ ಸಿಗುವ ಯಾವುದೇ ಸೌಲಭ್ಯ ಪಡೆಯುವಂತಿಲ್ಲ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...