alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಯಂವರದಲ್ಲಿ ಗೀತಾಗೆ ಇಂದು ಸಿಗಲಿಲ್ಲ ಯೋಗ್ಯ ವರ

ಪಾಕಿಸ್ತಾನದಿಂದ 2015ರಲ್ಲಿ ಭಾರತಕ್ಕೆ ಬಂದಿರುವ ವಿಕಲಾಂಗೆ ಗೀತಾ ಸ್ವಯಂವರ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಸ್ವಯಂವರದಲ್ಲಿ 14 ಯುವಕರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ಆರು ಹಾಗೂ ಕೊನೆ ದಿನ 8 ಯುವಕರು ಗೀತಾ ಮುಂದೆ ಹಾಜರಾಗಬೇಕಿತ್ತು. ಆದ್ರೆ ಗುರುವಾರ ಕೇವಲ 4 ಯುವಕರು ಮಾತ್ರ ಗೀತಾ ಮುಂದೆ ತಮ್ಮ ಮದುವೆ ಪ್ರಸ್ತಾಪವಿಟ್ಟಿದ್ದಾರೆ.

ದೇಶದ ಕೃಷಿಕನಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ ವರೆಗೆ 30 ಯುವಕರು ಗೀತಾ ಮದುವೆಗೆ ಆಸಕ್ತಿ ತೋರಿದ್ದರು. ತಮ್ಮ ಬಯೋಡೇಟಾವನ್ನು ಕಳುಹಿಸಿದ್ದರು. ಅದ್ರಲ್ಲಿ 14 ಮಂದಿಯನ್ನು ಆಯ್ಕೆ ಮಾಡಿ ಗೀತಾ ವಿದೇಶಾಂಗ ಸಚಿವಾಲಯಕ್ಕೆ ಕಳುಹಿಸಿದ್ದಳು.

ಗೀತಾ ಮದುವೆಯಾಗಲು ಷರತ್ತೊಂದನ್ನು ವಿಧಿಸಿದ್ದಾಳೆ. ಮದುವೆ ನಂತ್ರ ಪತಿ ಗೀತಾಳ ಪಾಲಕರನ್ನು ಹುಡುಕಲು ನೆರವಾಗಬೇಕಿದೆ. 8 ವರ್ಷದವಳಿದ್ದಾಗಲೇ ಆಕಸ್ಮಿಕವಾಗಿ ರೈಲೇರಿ ಪಾಕಿಸ್ತಾನ ತಲುಪಿದ್ದಳು ಗೀತಾ. 2015ರಲ್ಲಿ ಭಾರತಕ್ಕೆ ವಾಪಸ್ ಆಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...