alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನ ಮಂತ್ರಿ ಮೋದಿ ಹತ್ಯೆಗೆ ಸಂಚು..?

pm_gvofuok

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಯುವಕನೊಬ್ಬನಿಗೆ ಬಂದಿರುವ ಕರೆ ಆತಂಕಕ್ಕೆ ಕಾರಣವಾಗಿದೆ. ಯುವಕನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೈದ್ರೆ 50 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದ್ದಾನೆ.

ರಾಮನಗರದ ಕುಶಾಲ್ ಸೋನಿಗೆ ಶನಿವಾರ 4.50 ರ ಸುಮಾರಿಗೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಮುಂಬೈನಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ಜನಸಭೆಯಲ್ಲಿ ಮೋದಿಯವರ ಹತ್ಯೆಗೈದಲ್ಲಿ 50 ಕೋಟಿ ರೂಪಾಯಿ ನೀಡುವುದಾಗಿ ಆಫರ್ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಶುರುಮಾಡಿದ್ದಾರೆ.

ಮೇ 25 ರಂದು ಮುಂಬೈನಲ್ಲಿ ಮೋದಿ ಮಹಾಸಭೆ ನಡೆಯಲಿದೆ ಎಂದು ಅದೇ ವ್ಯಕ್ತಿ ಕುಶಾಲ್ ಗೆ ಮಾಹಿತಿ ನೀಡಿದ್ದಾನೆ. ಫೋನ್ ಮಾಡಿದ ವ್ಯಕ್ತಿ ತನ್ನ ಹೆಸರು, ವಿಳಾಸ ಹೇಳಿಲ್ಲ. ಆದ್ರೆ 8 ಸಂಖ್ಯೆಯ ನಂಬರ್ ನಿಂದ ಫೋನ್ ಬಂದಿತ್ತು ಎನ್ನಲಾಗಿದೆ. ಲಿಖಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...