alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಾನೇರ್ ನಲ್ಲಿ ಪತ್ತೆಯಾಯ್ತು ಪಾಕ್ ಗಿಡುಗ

giduga

ಜೈಸಲ್ಮೇರ್: ಗೂಢಚರ್ಯೆ ಮೊದಲಾದ ಕಾರಣಗಳಿಂದ, ಭಾರತಕ್ಕೆ ಪಾರಿವಾಳಗಳನ್ನು ಹಾರಿ ಬಿಡುವ ಪಾಕಿಸ್ತಾನ, ಈಗ ಗಿಡುಗವನ್ನು ಕಳಿಸಿದೆ.

ಪಾರಿವಾಳದ ಕಾಲಿಗೆ ಭಾರತ ವಿರೋಧಿ ಸಂದೇಶ ಬರೆದು ಕಳುಹಿಸುವುದು, ಟ್ರಾನ್ಸಿಸ್ಟರ್ ಕಟ್ಟಿ ಗೂಢಚರ್ಯೆ ನಡೆಸುವ ಪ್ರಕರಣ ಹಿಂದೆಯೇ ವರದಿಯಾಗಿವೆ. ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಬಿಕಾನೇರ್ ಸಮೀಪದ ಅನೂಪ್ ಘಡದಲ್ಲಿ ಪಾಕಿಸ್ತಾನದಿಂದ ಹಾರಿ ಬಂದ ಗಿಡುಗವೊಂದು ಪತ್ತೆಯಾಗಿದೆ. ಗಡಿ ಭದ್ರತಾ ಪಡೆಯ ಸಿಬ್ಬಂದಿ ಗಿಡುಗವನ್ನು ವಶಕ್ಕೆ ಪಡೆದುಕೊಂಡಿದ್ದು, ಅದು ಬಳಲಿದ್ದರಿಂದ ಆರೈಕೆ ಮಾಡಿದ್ದಾರೆ.

ಗಿಡುಗದ ಕಾಲಿನಲ್ಲಿ ಟ್ರಾನ್ಸಿಸ್ಟರ್ ಪತ್ತೆಯಾಗಿಲ್ಲ. ಅದು ಹಾರಾಟದ ಸಂದರ್ಭದಲ್ಲಿ ಬಿದ್ದುಹೋಗಿರಬಹುದೆಂದು ಹೇಳಲಾಗಿದೆ.

ಅರಬ್ ರಾಯಲ್ ಫ್ಯಾಮಿಲಿಯ ಸದಸ್ಯರು, ಹೌಬರಾ ಪಕ್ಷಿಯನ್ನು ಬೇಟೆಯಾಡಲು ತರಬೇತಿ ಹೊಂದಿದ ಗಿಡುಗಗಳೊಂದಿಗೆ ಪಾಕಿಸ್ತಾನ ಗಡಿ ಪ್ರದೇಶಕ್ಕೆ ಬರುತ್ತಾರೆ. ಇಂತಹ ಬೇಟೆಗೆ ಪಾಕಿಸ್ತಾನದಲ್ಲಿ ಅವಕಾಶ ನೀಡಲಾಗುತ್ತದೆ. ಈ ತರಬೇತಿ ನಿರತ ಗಿಡುಗ ದಾರಿ ತಪ್ಪಿ ಭಾರತದೊಳಗೆ ಬಂದಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...