alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಯುವಕನ ಬಂಡವಾಳ ಬಯಲು ಮಾಡಿದ ಭಾರತೀಯ ಯುವತಿ

ಮುಂಬೈ ಯುವತಿಗೆ, ಪಾಕಿಸ್ತಾನದ ಯುವಕನೊಬ್ಬ ತಾನು ಭಾರತೀಯ ಎಂದು ಸುಳ್ಳು ಹೇಳಿ ವಾಟ್ಸಾಪ್​​ ಮೂಲಕ ಮದುವೆಯ ಪ್ರಸ್ತಾಪವನ್ನಿಟ್ಟಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ.

ಯುವತಿಯು ತನ್ನ ಸ್ವ-ವಿವರಗಳನ್ನು ಮ್ಯಾಟ್ರಿಮೋನಿ ವೆಬ್​ ಸೈಟ್​​ ನಲ್ಲಿ ಅಪ್​ಲೋಡ್​ ಮಾಡಿದ್ದು, ಇವರ ರೆಸ್ಯೂಮ್ ನೋಡಿ ಸಾಕಷ್ಟು ಯುವಕರು ಮದುವೆ ಪ್ರಸ್ತಾವ ಕಳುಹಿಸಿದ್ದಾರೆ. ಅದ್ರಲ್ಲಿ ಈ ಯುವಕನು ಕೂಡಾ ಒಬ್ಬ.

ಈತ ತಾನು ಭಾರತೀಯ ಮೂಲದವನಾಗಿದ್ದು, ಲಂಡನ್ ​​ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರೋದಾಗಿ ತಿಳಿಸಿದ್ದಾನೆ. ಅಲ್ಲದೆ ಲಂಡನ್​​ ನಿಂದ ಭಾರತಕ್ಕೆ ಬಂದು ಮದುವೆಯಾಗುವ ಇರಾದೆ ಇರೋದಾಗಿ ಹೇಳಿಕೊಂಡಿದ್ದಾನೆ.

ಯುವತಿ ಕೆಲವು ಪ್ರಶ್ನೆಗಳ ಹಾಕಿದ್ದಾಳೆ. ಆಗ ಪಾಕ್​ ಯುವಕನಿಂದ ಉತ್ತರ ಬಾರದೆ ಇದ್ದಾಗ, ಆತ ವಾಟ್ಸಾಪ್ ನಲ್ಲಿ ​​ನಲ್ಲಿ ಕಳಿಸಿದ್ದ ಫೋಟೋ ನೆನಪಾಗಿದೆ. ಯುವಕ ಲಂಡನ್​​ ಆಸ್ಪತ್ರೆಯ ಐಡಿ ಕಾರ್ಡ್​​ ಕಳುಹಿಸಿದ್ದ. ಯುವತಿ ಲಂಡನ್​ ಆಸ್ಪತ್ರೆಗೆ ಕಾಲ್​ ಮಾಡಿ, ಈ ಆಸಾಮಿಯ ಬಗ್ಗೆ ವಿಚಾರಿಸಿದಾಗ, ಯುವಕ ಸುಳ್ಳು ಹೇಳಿರೋದು ಬಯಲಾಗಿದೆ.

ಪಾಕ್​ ಮೂಲದ ಯುವಕನಿಗೆ ಈಗಾಗಲೇ ಮದುವೆ ಆಗಿದ್ದು, ಮೂರು ಮಕ್ಕಳಿದ್ದಾರೆ. ಆತ, ಇನ್ನೂ ಹಲವು ಯುವತಿಯರಿಗೆ ಮೋಸ ಮಾಡಿದ್ದಾಗಿ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...