alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ಬಾಲಕನಿಗೂ ಸಿಕ್ತು ಆಧಾರ್ ಕಾರ್ಡ್

aadhar

ಭೂಪಾಲ್: ಭಾರತ ವಿಶೇಷ ಗುರುತು ಚೀಟಿ ಪ್ರಾಧಿಕಾರ ವತಿಯಿಂದ, ದೇಶದ ಪ್ರಜೆಗಳಿಗೆ ನೀಡುವ ಆಧಾರ್ ಕಾರ್ಡ್ ನಲ್ಲಿ ಏನೆಲ್ಲಾ ಲೋಪ, ಯಡವಟ್ಟುಗಳಾಗಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ.

ಪಾಕಿಸ್ತಾನದ ಬಾಲಕನೊಬ್ಬನಿಗೆ ಆಧಾರ್ ಕಾರ್ಡ್ ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಪಾಕಿಸ್ತಾನ ಮೂಲದ ಬಾಲಕ ತನ್ನ ತಾಯಿಯೊಂದಿಗೆ ಬಾಂಗ್ಲಾ ದೇಶದ ಮೂಲಕ ಭಾರತಕ್ಕೆ ಬಂದಿದ್ದು, ಭೂಪಾಲ್ ನಲ್ಲಿರುವ ಆಶ್ರಯ ತಾಣಗಳಲ್ಲಿ ನೆಲೆಸಿದ್ದಾನೆ. ಬಾಲಕನ ತಂದೆಗೆ ಮತ್ತೊಂದು ಮದುವೆಯಾಗಿದ್ದು, ಪತ್ನಿಯೊಂದಿಗೆ ಪಾಕಿಸ್ತಾನದಲ್ಲಿಯೇ ನೆಲೆಸಿದ್ದಾರೆ. ಈ ಬಾಲಕ ತನ್ನ ತಾಯಿಯೊಂದಿಗೆ ಇದ್ದು, ಆತನಿಗೆ ಮಧ್ಯಪ್ರದೇಶ ಸರ್ಕಾರದಿಂದ ನಿಯೋಜಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಯೊಂದು ಆಧಾರ್ ಕಾರ್ಡ್ ನೀಡಿದೆ.

ಆಧಾರ್ ಕಾರ್ಡ್ ಪಡೆಯಲು ಭಾರತೀಯನಾಗಿರುವ ಜೊತೆಗೆ ಕೆಲವು ನಿಯಮಗಳು ಕೂಡ ಇರುತ್ತವೆ. ಇವುಗಳನ್ನು ಪರಿಶೀಲನೆ ಮಾಡದೇ, ಏಕಾಏಕಿ ಆತನಿಗೆ ಆಧಾರ್ ಕಾರ್ಡ್ ಕೊಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅಯೋಧ್ಯನಗರ ಠಾಣೆ ಪೊಲೀಸರು ಕೂಡ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...