alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದಿಂದ 17ರ ಹುಡುಗಿ ಸರಪಳಿಯಲ್ಲಿ ಬಂಧಿ

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ 17 ವರ್ಷದ ಹುಡುಗಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಲಾಗಿದೆ. ಬಬಲಿ ಹೆಸರಿನ ಈ ಹುಡುಗಿ ಲಹೋರಿ ಗ್ರಾಮಕ್ಕೆ ಸೇರಿದವಳಾಗಿದ್ದಾಳೆ.

ಬಬಲಿ ಮಾನಸಿಕ ಅಸ್ವಸ್ಥಳಂತೆ. ಆಕೆ ಬೇರೆಯವರಿಗೆ ತೊಂದರೆ ನೀಡದಿರಲಿ ಎನ್ನುವ ಕಾರಣಕ್ಕೆ ಮನೆಯವರು ಆಕೆಯನ್ನು ಕೂಡಿ ಹಾಕಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬ ಮಗಳಿಗೆ ಚಿಕಿತ್ಸೆ ನೀಡಲಾಗದೆ ಸರಪಳಿ ಮೊರೆ ಹೋಗಿದೆ. ಈ ಬಗ್ಗೆ ಅನೇಕ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಸರ್ಕಾರಕ್ಕೆ ಪತ್ರ ಬರೆದು ನೆರವು ಕೇಳಲಾಗಿದೆಯಂತೆ. ಆದ್ರೆ ಯಾರೂ ನೆರವಿಗೆ ಬರಲಿಲ್ಲ ಎನ್ನುತ್ತಾರೆ ಬಬಲಿ ಕುಟುಂಬಸ್ಥರು.

ಬಬಲಿಗೆ 10 ವರ್ಷದಲ್ಲಿರುವಾಗಲೇ ಆರೋಗ್ಯ ಸಮಸ್ಯೆ ಕಾಡಿತ್ತಂತೆ. ಆಸ್ಪತ್ರೆಗೆ ಸೇರಿಸಿದ್ರು ಯಾವುದೇ ಪ್ರಯೋಜನವಾಗಲಿಲ್ಲ. ದಿನ ದಿನಕ್ಕೂ ಬಬಲಿ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತಂತೆ. ಆಸ್ಪತ್ರೆ ಸಿಬ್ಬಂದಿ ದೊಡ್ಡ ಆಸ್ಪತ್ರೆ ಹೆಸರು ಹೇಳಿ ಬಬಲಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರಂತೆ. ದಿನ ಕಳೆದಂತೆ ಬಬಲಿ ಅಬ್ಬರ ಜೋರಾಗಿದ್ದು ಆಕೆಯನ್ನು ನಿಯಂತ್ರಿಸುವುದು ಕಷ್ಟವಾಗುತ್ತೆ ಎನ್ನುತ್ತಾರೆ ಬಬಲಿ ತಂದೆ. ಇದೇ ಕಾರಣಕ್ಕೆ ಆಕೆಯನ್ನು ಸರಪಳಿಯಲ್ಲಿ ಕಟ್ಟಿ ಹಾಕಲಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...