alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಸ್ಥ ಮಹಿಳೆಯರಿಗೊಂದು ಸಿಹಿ ಸುದ್ದಿ

Paid maternity leave increased to 6 months

ಕೇಂದ್ರ ಸರ್ಕಾರ, ಗರ್ಭಿಣಿ ನೌಕರರಿಗೆ ಸಿಗುವ ರಜಾ ಅವಧಿಯನ್ನು 3 ತಿಂಗಳಿನಿಂದ 6 ತಿಂಗಳಿಗೆ ಹೆಚ್ಚಿಸಿದೆ. ಮಗುವನ್ನು ದತ್ತು ತೆಗೆದುಕೊಂಡವರಿಗೆ ಹಾಗೂ ಬಾಡಿಗೆ ತಾಯಿಯಾಗುತ್ತಿರುವವರಿಗೂ ಕೂಡ 3 ತಿಂಗಳ ರಜಾ ಅವಧಿ ಸಿಗಲಿದೆ.

ಭಾರತದಲ್ಲಿ 1961 ರಿಂದ ಜಾರಿಯಲ್ಲಿರುವ ಮೆಟರ್ನಿಟಿ ಬೆನಿಫಿಟ್ ಕಾನೂನಿನ ಪ್ರಕಾರ, 10 ಕ್ಕಿಂತಲೂ ಹೆಚ್ಚಿನ ನೌಕರರನ್ನು ಹೊಂದಿರುವ ಸಂಸ್ಥೆಗಳು, ಮಹಿಳಾ ಉದ್ಯೋಗಿ ಗರ್ಭಿಣಿಯಾದ ನಂತರ ಆಕೆಯ ನೌಕರಿಯನ್ನು ಸುರಕ್ಷಿತಗೊಳಿಸತಕ್ಕದ್ದು. ಜೊತೆಗೆ ಅವಳಿಗೆ 12 ತಿಂಗಳ ತನಕ ರಜಾ ತೆಗೆದುಕೊಳ್ಳುವ ಹಕ್ಕು ಕೂಡ ಇರುತ್ತದೆ. ಈ ಸಮಯದಲ್ಲಿ ಅವಳಿಗೆ ಸಂಬಳ ಸಹಿತ ನೌಕರಿಗೆ ಸಂಬಂಧಿತ ಎಲ್ಲ ಸೌಲಭ್ಯಗಳೂ ದೊರಕುತ್ತವೆ.

ಪ್ರತಿಶತ 50 ಮಂದಿ ಮಹಿಳೆಯರು ಮಕ್ಕಳಾದ ನಂತರ ನೌಕರಿಯನ್ನು ತೊರೆಯುತ್ತಾರೆ. ಹಾಗಾಗಿ ಗರ್ಭಿಣಿ ಮತ್ತು ತಾಯಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸುವ ಕುರಿತು ಕೂಡ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...