alex Certify
ಕನ್ನಡ ದುನಿಯಾ       Mobile App
       

Kannada Duniya

‘ಪದ್ಮಾವತ್’ ಗೆ ವಿರೋಧ : ಮಾಲ್, ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತ್ ಚಿತ್ರ ವಿರೋಧಿಸಿ ಕರಣಿ ಸೇನೆ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಗುಜರಾತಿನ ಅಹಮದಾಬಾದ್ ನಲ್ಲಿ ಬೆಂಕಿ ಹಚ್ಚಿ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕರಣಿ ಸೇನೆ ಮಾಲ್ ಒಂದಕ್ಕೆ ಬೆಂಕಿ ಹಚ್ಚಿದೆ.

ಹಿಮಾಲಯನ್ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಮಾಲ್ ಗೆ ಬೆಂಕಿ ಹಚ್ಚುವ ವೇಳೆ ಸುಮಾರು 2 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಸ್ಥಳದಲ್ಲಿದ್ದರು ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮಾಲ್ ಜೊತೆ ಸುತ್ತಮುತ್ತಲ ಅಂಗಡಿಗಳು ಅಗ್ನಿಗೆ ಆಹುತಿಯಾಗಿವೆ ಎಂದು ಮೂಲಗಳು ಹೇಳಿವೆ.

ಮಾಲ್ ಮುಂದೆ ಪದ್ಮಾವತ್ ಚಿತ್ರ ಬಿಡುಗಡೆಯಾಗುವುದಿಲ್ಲವೆಂದು ಬೋರ್ಡ್ ಹಾಕಲಾಗಿತ್ತಂತೆ. ಆದ್ರೂ ಕರಣಿ ಸೇನೆ ಮಾಲ್ ಗೆ ಬೆಂಕಿ ಹಚ್ಚಿದೆ. ಮಾಲ್ ಮುಂದೆ ನಿಂತಿದ್ದ 10ಕ್ಕೂ ಹೆಚ್ಚು ವಾಹನಗಳಿಗೂ ಬೆಂಕಿ ಹಚ್ಚಿದೆ. ಇದಲ್ಲದೆ ಅಹಮದಾಬಾದ್ ನ ಇನ್ನೊಂದು ಮಾಲ್ ಮೇಲೆ ದಾಳಿ ಮಾಡಿರುವ ಕರಣಿ ಸೇನೆ ಮಾಲ್ ಮುಂದಿದ್ದ ವಾಹನಕ್ಕೆ ಬೆಂಕಿ ಹಚ್ಚಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...