alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಯೊಬ್ಬ ಹೆಣ್ಣು ಮಗುವಿನ ಹೆಸರಲ್ಲಿ 11 ಸಾವಿರ ರೂ.

girl-health-care-fd_19_09_2016

ಭಾರತದ ಅತಿ ದೊಡ್ಡ ಆರೋಗ್ಯ ರಕ್ಷಣಾ ನೆಟ್ ವರ್ಕ್ ಒ ಎಕ್ಸ್ ಎಕ್ಸ್ ವೈ ಮಹತ್ವದ ಘೋಷಣೆ ಮಾಡಿದೆ. ಭಾರತದಲ್ಲಿ ಜನಿಸುವ ಪ್ರತಿಯೊಬ್ಬ ಹೆಣ್ಣು ಮಗುವಿನ ಹೆಸರಿನಲ್ಲಿ 11 ಸಾವಿರ ರೂ. ಸ್ಥಿರ ಠೇವಣಿ ಇಡುವುದಾಗಿ ತಿಳಿಸಿದೆ. ರಿಯೊ ಒಲಂಪಿಕ್ಸ್ ನಲ್ಲಿ ಮಹಿಳಾ ಆಟಗಾರ್ತಿಯರ ಸಾಧನೆ ನೋಡಿದ ನಂತ್ರ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.

ಒ ಎಕ್ಸ್ ಎಕ್ಸ್ ವೈ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದು, ಆರೋಗ್ಯ ರಕ್ಷಣಾ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಸುಮಾರು 15 ಲಕ್ಷ ಜನರ ಆರೋಗ್ಯ ತಪಾಸಣೆಗೆ ನೆರವಾಗಿದೆ.

ಮುಂದಿನ ಜನಾಂಗ ಆರೋಗ್ಯವಾಗಿರಬೇಕು. ಹುಡುಗಿಯರಿಗೂ ಸಮಾನ ಸ್ಥಾನಮಾನ ಸಿಗಬೇಕು. ಈ ಉದ್ದೇಶದಿಂದ ಹುಟ್ಟುವ ಪ್ರತಿಯೊಂದು ಹೆಣ್ಣು ಮಗುವಿನ ಹೆಸರಿನಲ್ಲಿ ಸ್ಥಿರ ಠೇವಣಿ ಇಡಲು ನಿರ್ಧರಿಸಿರುವುದಾಗಿ ಒ ಎಕ್ಸ್ ಎಕ್ಸ್ ವೈ ಕಂಪನಿ ಸಹ ಸಂಸ್ಥಾಪಕಿ ಶೀತಲ್ ಕಪೂರ್ ಹೇಳಿದ್ದಾರೆ. ರಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಹಾಗೂ ಕಂಚು ಗೆದ್ದ ನಂತ್ರ ಒ ಎಕ್ಸ್ ಎಕ್ಸ್ ವೈ ಬಂಗಾರದ ಪದಕ ಗೆಲ್ಲುವ ಉದ್ದೇಶದಿಂದ ಪ್ರತಿಯೊಬ್ಬ ಬಾಲಕಿಗೆ ನೆರವಾಗುವುದಾಗಿ ಅವರು ಹೇಳಿದ್ದಾರೆ.

ಪಾಲಕರಿಗೆ ಹೆಣ್ಣು ಮಗುವಾಗಿದೆ ಎಂದು ಚಿಂತೆ ಬೇಡ. ಸಂಪೂರ್ಣ ಹಣವನ್ನು ಒ ಎಕ್ಸ್ ಎಕ್ಸ್ ವೈ ಭರಿಸಲಿದೆ.ಅವರ ಆರೋಗ್ಯ, ಶಿಕ್ಷಣ ಹಾಗೂ ಉತ್ತಮ ಭವಿಷ್ಯದ ಬಗ್ಗೆ ಪಾಲಕರು ಗಮನ ನೀಡಬೇಕೆಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...