alex Certify
ಕನ್ನಡ ದುನಿಯಾ       Mobile App
       

Kannada Duniya

ಆಕ್ಸ್ ಫರ್ಡ್ ವಿವಿಯಲ್ಲಿ ಪ್ರೊಫೆಸರ್ ಆಗಿದ್ದವರು ದೆಹಲಿಯಲ್ಲಿ ಬೀದಿಪಾಲು

76 ವರ್ಷದ ರಾಜ್ ಸಿಂಗ್, ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದವರು. ಆದ್ರೆ ಸುಮಾರು ವರ್ಷಗಳಿಂದ ದೆಹಲಿಯ ಬೀದಿಯಲ್ಲೇ ಇವರ ವಾಸ. ಈಗ ಸಾಮಾಜಿಕ ಜಾಲತಾಣಗಳಿಂದಾಗಿ ರಾಜಾ ಸಿಂಗ್ ಗೆ ಸೂರಿನ ಭಾಗ್ಯ ಸಿಕ್ಕಿದೆ.

ರಾಜಾ ಸಿಂಗ್ ಮತ್ತವರ ಸಹೋದರ ಜೊತೆಯಾಗಿ ಟ್ರಾವೆಲ್ ಉದ್ಯಮ ನಡೆಸುತ್ತಿದ್ರು. ಅವರ ಸಹೋದರನ ಸಾವಿನ ಬಳಿಕ ಉದ್ಯಮ ಮುನ್ನಡೆಸಲು ಸಾಧ್ಯವಾಗಲೇ ಇಲ್ಲ. ಮಕ್ಕಳು ರಾಜಾ ಸಿಂಗ್ ರನ್ನು ಮನೆಯಿಂದ ಹೊರಹಾಕಿದ್ರು.

ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿದ ರಾಜಾ ಸಿಂಗ್ ಬೀದಿ ಪಾಲಾದ್ರು. ಅವರ ಇಬ್ಬರು ಮಕ್ಕಳೀಗ ವಿದೇಶಿ ಪತ್ನಿಯರೊಂದಿಗೆ ಬ್ರಿಟನ್ ಹಾಗೂ ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದ್ರೆ ರಾಜಾ ಸಿಂಗ್ ಮಾತ್ರ ದೆಹಲಿಯ ರೈಲ್ವೆ ಸ್ಟೇಶನ್ ಬಳಿ ಅನಾಥವಾಗಿದ್ದರು.

ಅಗತ್ಯವಿರುವವರಿಗೆ ವೀಸಾ ಫಾರ್ಮ್ ಭರ್ತಿ ಮಾಡಿಕೊಟ್ಟು ನಾಲ್ಕು ಕಾಸು ಸಂಪಾದಿಸಿ, ಅದರಲ್ಲೇ ಜೀವನ ನಡೆಸ್ತಿದ್ದಾರೆ ರಾಜಾ ಸಿಂಗ್. ಅವಿನಾಶ್ ಸಿಂಗ್ ಎಂಬಾತ ಅವರ ಕರುಣಾಜನಕ ಕಥೆಯನ್ನು ಫೇಸ್ಬುಕ್ ನಲ್ಲಿ ಪ್ರಕಟಿಸಿದ ಬಳಿಕ ಗುರುದ್ವಾರವೊಂದರಲ್ಲಿ ರಾಜಾ ಸಿಂಗ್ ಗೆ ಆಶ್ರಯ ಹಾಗೂ ಕೆಲಸ ಎರಡೂ ಸಿಕ್ಕಿದೆ.

He is an Oxford graduate who shifted to India on the insistence of his brother in the Sixties – 60s. Today 76-year-old…

Posted by Avinash Singh on Friday, April 20, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...