alex Certify
ಕನ್ನಡ ದುನಿಯಾ       Mobile App
       

Kannada Duniya

‘ಶ್ವಾನ’ ಸಾಕುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ….!

ಈ ಸುದ್ದಿ ನಿಜಕ್ಕೂ ತುಂಬಾ ಕುತೂಹಲಕಾರಿಯಾಗಿದೆ. ಶ್ವಾನಗಳನ್ನು ಸಲಹುವ ಮಾಲೀಕರು ಹೃದಯ ಕಾಯಿಲೆಗಳಿಂದ ದೂರವಿರುತ್ತಾರಂತೆ! ಇದು ಸುಳ್ಳಲ್ಲ. ಅಧ್ಯಯನವೊಂದು ಈ ಕುರಿತು ವರದಿ ನೀಡಿದ್ದು, ಶ್ವಾನಗಳನ್ನು ಸಾಕುವವರಿಗೆ ಹೃದ್ರೋಗಗಳು ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.

ಶ್ವಾನಗಳನ್ನು ಸಾಕುವುದರಿಂದ ಶೇ.24 ರಷ್ಟು ಹೃದ್ರೋಗ ಹಾಗೂ ಶೇ.20 ರಷ್ಟು ಇನ್ನಿತರ ಕಾಯಿಲೆಗಳಿಂದ ಬಚಾವಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.

ಶ್ವಾನ ಮಾಲೀಕರ ದೇಹ ಆರೋಗ್ಯ ಚಟುವಟಿಕೆಯಿಂದ ಕೂಡಿರುತ್ತದೆ. ರಕ್ತದ ಒತ್ತಡ ಹಾಗೂ ಮಾನಸಿಕ ಒತ್ತಡದ ಸಮಸ್ಯೆಯಿಂದ ದೂರ ಇರುತ್ತಾರೆ. ಶ್ವಾನವನ್ನು ಹೊಂದಿರುವ ಹಾಗೂ ಹೊಂದಿರದೇ ಇರುವವರ ಜೀವನ ಕ್ರಮಗಳಲ್ಲೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ ಎಂದು ಅಧ್ಯಯನ ಹೇಳಿದೆ.

ಈಗಾಗಲೇ ಆರೋಗ್ಯ ಸಮಸ್ಯೆ ಇರುವ, ಇಲ್ಲದೇ ಇರುವವರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, 2 ವಿಭಾಗದಲ್ಲೂ ಶ್ವಾನ ಮಾಲೀಕರು ಹಾಗೂ ಶ್ವಾನ ಸಾಕದೇ ಇರುವವರನ್ನು ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ವಿವಿಧ ಪ್ರಶ್ನೆಗಳನ್ನೂ ಕೇಳಲಾಗಿದೆ. ಇದರಲ್ಲಿ ಶ್ವಾನಗಳೊಂದಿಗೆ ಕಾಲ ಕಳೆಯುವವರ ದೈನಂದಿನ ಚಟುವಟಿಕೆ ಹೆಚ್ಚು ಉಲ್ಲಾಸಮಯವಾಗಿರುತ್ತದೆ ಎಂಬ ಅಂಶ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...