alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಕಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿದ ಚಾಣಾಕ್ಷ

_215d5af6-cca9-11e5-83ed-24f59eb81169

ತಂತ್ರಜ್ಞಾನದ ಬಗ್ಗೆ ಮಾಹಿತಿ ಇದ್ದರೆ ಸಂಕಷ್ಟದ ಪರಿಸ್ಥಿತಿಯಲ್ಲಿ ಅದು ಹೇಗೆ ನೆರವಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಮಾಲೀಕರೊಬ್ಬರು ತಮ್ಮ ಕಾರನ್ನು ಕಳವು ಮಾಡಿದ್ದ ಕಳ್ಳರು 14 ಕಿ.ಮೀ. ದೂರ ಹೋಗಿದ್ದರೂ ಇರುವ ಜಾಗದಿಂದಲೇ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ನವದೆಹಲಿಯ ವಿವೇಕ್ ವಿಹಾರ್ ನಿವಾಸಿ ಎಸ್.ಎನ್. ಶರ್ಮಾ ಎಂಬವರು ಶನಿವಾರದಂದು ವೈಶಾಲಿಯಲ್ಲಿ ಏರ್ಪಟ್ಟಿದ್ದ ಪಾರ್ಟಿಯೊಂದಕ್ಕೆ ಕುಟುಂಬ ಸಮೇತ ತಮ್ಮ ಇನ್ನೋವಾ ಕಾರಿನಲ್ಲಿ ತೆರಳಿದ್ದರು. ಇವರೆಲ್ಲರೂ ಪಾರ್ಟಿ ಹಾಲ್ ಒಳಗೆ ಇದ್ದ ವೇಳೆ ಮೂರು ಮಂದಿ ಕಳ್ಳರ ತಂಡ ಪಾರ್ಕಿಂಗ್ ಲಾಟ್ ನಲ್ಲಿದ್ದ ಕಾರಿನ ಬಳಿ ಬಂದಿದೆ.

ಕಾರೊಳಗೆ ಕುಳಿತಿದ್ದ ಚಾಲಕ 65 ವರ್ಷದ ನರೇಂದ್ರ ಕೌಶಿಕ್ ಗೆ ಬೆದರಿಕೆ ಹಾಕಿ ಆತನ ಸಮೇತ ಕಾರನ್ನು ಅಪಹರಿಸಿದ್ದಾರೆ. ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದ ಕಾರಣ ಪಾರ್ಟಿ ಹಾಲ್ ನಲ್ಲಿದ್ದ ಶರ್ಮಾ ಅವರಿಗೆ ತಮ್ಮ ಕಾರು ಚಲಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಮೊಬೈಲ್ ಸಹಾಯದಿಂದ ತಾವಿರುವ ಜಾಗದಿಂದಲೇ ಕಾರಿನ ಇಂಜಿನ್ ಆಫ್ ಮಾಡಿದ್ದಾರೆ.

ಅಷ್ಟರಲ್ಲಾಗಲೇ ಕಾರು 14 ಕಿ.ಮೀ. ಗಳಷ್ಟು ದೂರ ಸಾಗಿದೆ. ಕಾರಿನ ಇಂಜಿನ್ ಆಫ್ ಆದ ಕಾರಣ ಮತ್ತೆ ಸ್ಟಾರ್ಟ್ ಮಾಡಲು ಕಳ್ಳರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ರೊಚ್ಚಿಗೆದ್ದು ಚಾಲಕ ನರೇಂದ್ರ ಕೌಶಿಕ್ ಅವರನ್ನು ಥಳಿಸಿ ಅಲ್ಲಿಂದ ಪರಾರಿಯಾಗಿದೆ. ಪೊಲೀಸರು ಕಾರನ್ನು ಈಗ ಮಾಲೀಕ ಶರ್ಮಾ ಅವರ ವಶಕ್ಕೆ ನೀಡಿದ್ದು, ಗಾಯಗೊಂಡಿರುವ ಚಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...