alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಒಲಿಸಿಕೊಳ್ಳಲು ಗೂಬೆ ಬಲಿ ನೀಡ್ದ…!

ದೆಹಲಿಯ ಸುಲ್ತಾನ್ ಪುರಿ ಪ್ರದೇಶದ ಮನೆಯೊಂದರಲ್ಲಿ ಗೂಬೆ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯ ಪ್ರೀತಿಗೆ ಬಿದ್ದಿದ್ದ ಚಾಲಕ, ಆಕೆಯನ್ನು ಒಲಿಸಿಕೊಳ್ಳಲು ಈ ಕೃತ್ಯವೆಸಗಿದ್ದನಂತೆ.

ವಿವಾಹಿತ ವ್ಯಕ್ತಿಗೆ ಮಹಿಳೆಯೊಬ್ಬಳ ಮೇಲೆ ಕಣ್ಣು ಬಿದ್ದಿತ್ತು. ಆಕೆಯನ್ನು ಒಲಿಸಿಕೊಳ್ಳಲು ತಂತ್ರದ ಮೊರೆ ಹೋಗಿದ್ದಾನೆ. ದೀಪಾವಳಿ ದಿನ ಗೂಬೆಯನ್ನು ಬಲಿ ನೀಡಿದ್ರೆ ಇಷ್ಟಪಟ್ಟವರು ಒಲಿಯುತ್ತಾರೆಂದು ನಂಬಿದ್ದ ಆತ, ಈ ಕೆಲಸಕ್ಕೆ ಕೈ ಹಾಕಿದ್ದಾನೆ. ಗೊಬೆ ಹತ್ಯೆಗೆ ಈತನಿಗೆ ನೆರವಾಗಿದ್ದು ಯುಟ್ಯೂಬ್.

ಯುಟ್ಯೂಬ್ ನಲ್ಲಿ ಗೂಬೆಯನ್ನು ಹೇಗೆ ಬಲಿ ನೀಡಬೇಕೆನ್ನುವ ಬಗ್ಗೆ ಸಂಪೂರ್ಣ ವಿವರವಿತ್ತಂತೆ. ಅದನ್ನು ನೋಡಿಕೊಂಡು ವಿಧಿ ಪೂರ್ಣಗೊಳಿಸಿದ್ದಾನೆ. ದೀಪಾವಳಿ ದಿನವೇ ಆರೋಪಿ ತಂದೆ ಸಾವನ್ನಪ್ಪಿದ್ದರು ಎನ್ನಲಾಗಿದೆ. ತಂದೆ ಆತ್ಮಕ್ಕೆ ಶಾಂತಿ ನೀಡಲು ಮನೆಯಲ್ಲಿ ಕೆಲಸ ನಡೆಯುತ್ತಿದೆ ಎಂದುಕೊಂಡಿದ್ದರು.

ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ತಂದೆ ಬೇಧಿಗೆ ತುತ್ತಾಗಿದ್ದರು. ಅವ್ರಿಗಾಗಿ ಈ ತಂತ್ರ ನಡೆದಿಲ್ಲ. ಮಹಿಳೆಗಾಗಿ ಗೊಬೆ ಹತ್ಯೆ ಮಾಡಿದ್ದೇನೆ. ಯುಟ್ಯೂಬ್ ಸಹಾಯದಿಂದ ಈ ಕೆಲಸ ಮಾಡಿದ್ದೇನೆ. ದೆಹಲಿ ಅಜ್ಞಾತ ಸ್ಥಳದಿಂದ ಗೂಬೆ ಖರೀದಿ ಮಾಡಿದ್ದೆ ಎಂದು ಆರೋಪಿ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...