alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸೋರು ಓದಲೇಬೇಕಾದ ಸುದ್ದಿ

traffice-police

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯ ತಯಾರಿ ನಡೆಸುತ್ತಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಿಯಮ ರೂಪಿಸಲಾಗ್ತಾ ಇದೆ. ಮದ್ಯಪಾನ ಹಾಗೂ ಹೆಲ್ಮೆಟ್ ರಹಿತ ವಾಹನ ಚಲಾಯಿಸುವವರ ಜೇಬಿಗೆ ದೊಡ್ಡ ಪ್ರಮಾಣದಲ್ಲಿ ಕತ್ತರಿ ಬೀಳಲಿದೆ.

ಬಜೆಟ್ ಅಧಿವೇಶನದಲ್ಲಿ ವಿದೇಯಕ ಮಂಡಿಸುವುದಾಗಿ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಮೂಲಗಳ ಪ್ರಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೊಂಡಲ್ಲಿ ನಿಯಮ ಮತ್ತಷ್ಟು ಕಠಿಣವಾಗಲಿದೆ.

ಕುಡಿದು ವಾಹನ ಚಲಾಯಿಸಿದ್ರೆ 1000 ರೂಪಾಯಿ ದಂಡ. ಹಿಟ್ ಅಂಡ್ ರನ್ ಕೇಸ್ ನಲ್ಲಿ 2 ಲಕ್ಷದವರೆಗೆ ಪರಿಹಾರ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರೆ 10 ಲಕ್ಷ ರೂಪಾಯಿವರೆಗೆ ಪರಿಹಾರ. ವೇಗವಾಗಿ ವಾಹನ ಚಲಾವಣೆ ಮಾಡಿದ್ರೆ 1000-4000 ರೂ. ದಂಡ, ವಿಮೆ ಇಲ್ಲದೆ ಗಾಡಿ ಚಲಾಯಿಸಿದ್ರೆ 2 ಸಾವಿರದವರೆಗೆ ದಂಡ ಹಾಗೂ ಮೂರು ತಿಂಗಳು ಜೈಲು ಶಿಕ್ಷೆ, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ರೆ 2 ಸಾವಿರದವರೆಗೆ ದಂಡ ಹಾಗೂ ಮೂರು ತಿಂಗಳು ಲೈಸೆನ್ಸ್ ರದ್ದಾಗುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...