alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕಾಗಿ ಮಾಡಿದ ಖರ್ಚೆಷ್ಟು ಗೊತ್ತಾ..?

narendramodi-kMlE--621x414@LiveMint

ಪ್ರಧಾನಿಯಾದ ಬಳಿಕ ವಿದೇಶ ಪ್ರವಾಸದಲ್ಲಿಯೇ ಪ್ರಧಾನಿ ಮೋದಿ ಅವರು ಕಾಲಹರಣ ಮಾಡುತ್ತಿದ್ದಾರೆ ಎಂಬ ಟೀಕೆ ಕೇಳಿ ಬರುತ್ತಿರುವ ನಡುವೆಯೇ ಒಂದೇ ವರ್ಷದಲ್ಲಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟ ಸಹೋದ್ಯೋಗಿಗಳ ವಿದೇಶ ಪ್ರವಾಸಕ್ಕಾಗಿ ಬರೋಬ್ಬರಿ 567 ಕೋಟಿ ರೂಪಾಯಿಗಳು ಖರ್ಚಾಗಿದೆ ಎಂಬ ಮಾಹಿತಿ ಲಭಿಸಿದೆ.

2015-16 ನೇ ಸಾಲಿನ ಬಜೆಟ್ ನಲ್ಲಿ ನಿಗದಿಪಡಿಸಲಾಗಿದ್ದ 269 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಪ್ರವಾಸಕ್ಕೆ ಖರ್ಚಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಅಧಿಕಾರಿಗಳ ಪ್ರವಾಸ ವೆಚ್ಚ 1,500 ಕೋಟಿ ರೂಪಾಯಿ ದಾಟಿದೆ.

ವಿಶೇಷವೆಂದರೆ ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ 2010 ರಿಂದ 2014 ರವರೆಗೆ ಪ್ರಧಾನಿ ಮತ್ತು ಅವರ ಕ್ಯಾಬಿನೆಟ್ ಸಹೋದ್ಯೋಗಿಗಳು ಸುಮಾರು 1,500 ಕೋಟಿ ರೂ. ಹಣವನ್ನು ಪ್ರವಾಸಗಳಿಗೆ ವಿನಿಯೋಗಿಸಿದ್ದರೆ, ಎನ್ ಡಿ ಎ ಸರ್ಕಾರ ಕೇವಲ 3 ವರ್ಷಗಳಲ್ಲಿ 1,140 ಕೋಟಿ ರೂ. ಹಣ ವೆಚ್ಚ ಮಾಡಿದ್ದು, ಟೀಕಾಕಾರರಿಗೆ ಮತ್ತೊಂದು ವಿಷಯ ಸಿಕ್ಕಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...