alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ ! ಅಧಿಕಾರಿಗಳ ವಿದೇಶ ಯಾತ್ರೆಗೆ ಖರ್ಚಾಗಿರುವುದೆಷ್ಟು ಗೊತ್ತಾ..?

air-plane

ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯದ ಅಧಿಕಾರಿಗಳು ತಮ್ಮ ವಿದೇಶ ಯಾತ್ರೆಗಾಗಿ ಬರೋಬ್ಬರಿ 1,500 ಕೋಟಿ ರೂ. ಗೂ ಅಧಿಕ ಹಣವನ್ನು ವೆಚ್ಚ ಮಾಡಿದ್ದಾರೆ. ಈ ಕುರಿತ ಮಾಹಿತಿಯನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೇ ಲೋಕಸಭೆಯಲ್ಲಿ ನೀಡಿದ್ದಾರೆ.

ಸಚಿವಾಲಯದ ಅಧಿಕಾರಿಗಳ ವಿದೇಶ ಯಾತ್ರೆಗೆ ಈ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 1,537 ಕೋಟಿ ರೂ. ಖರ್ಚಾಗಿದ್ದು, 2012- 13 ರಲ್ಲಿ 593.09 ಕೋಟಿ ರೂ., 2013- 14 ರಲ್ಲಿ 434.94 ಕೋಟಿ ರೂ. ಹಾಗೂ 2014- 15 ರಲ್ಲಿ 509.91 ಕೋಟಿ ರೂ. ಖರ್ಚಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದ ಅಧಿಕಾರಿಗಳ ತಂಡದಲ್ಲಿ ಇದುವರೆಗೂ 15 ಮಂದಿ ಇರುತ್ತಿದ್ದರು. ಆದರೆ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಸರ್ಕಾರ, ಅಧಿಕಾರಿಗಳು ಅಗತ್ಯ ಬಿದ್ದ ಸಂದರ್ಭದಲ್ಲಿ ನಾಲ್ಕು ಮಂದಿ ತೆರಳಬಹುದೆಂದು ಹೇಳಿದೆಯಲ್ಲದೇ ಪ್ರವಾಸದ ಅವಧಿ 5 ದಿನ ಮೀರಬಾರದು ಎಂದು ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...