alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 100 ರೂ.ಗಳಿಗಾಗಿ ನಡೆದಿದೆ ಹತ್ಯೆ

ಮುಂಬೈ: 100 ರೂಪಾಯಿ ಸಾಲ ಮರುಪಾವತಿ ಮಾಡಲಿಲ್ಲ ಎಂದು ಹೋಟೆಲ್ ನೌಕರನೊಬ್ಬ ತನ್ನ ಸಹೋದ್ಯೋಗಿಯನ್ನು ಚಾಕುವಿನಿಂದ ಚುಚ್ಚಿ ಕೊಂದ ಘಟನೆ ನಡೆದಿದೆ.

ಕಲಾಮ್ ಬುಟ್ಟುಖಾನ್ (18) ಮೃತ ಯುವಕ. ಈತ ಈದ್ ಹಬ್ಬ ಆಚರಿಸಲು ತನ್ನ ಸಹೋದ್ಯೋಗಿ ಅಫ್ತಾಬ್ ನಿಂದ 100 ರೂಪಾಯಿ ಸಾಲ ಪಡೆದುಕೊಂಡಿದ್ದ. ಇವರಿಬ್ಬರು ಕುರ್ಲಾ ಉಪ ನಗರದ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಸಾಲ ಮರು ಪಾವತಿಗೆ ಕಲಾಮ್ ಬುಟ್ಟು ಖಾನ್‌ಗೆ ಸಾಧ್ಯವಾಗಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಒಂದು ಹಂತದಲ್ಲಿ ಜಗಳ ತಾರಕಕ್ಕೆ ಹೋಗಿ ಅಫ್ತಾಬ್ ಸಿಟ್ಟಿನಿಂದ ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಚಾಕುವಿನಿಂದ ಕಲಾಮ್ ನನ್ನು ಚುಚ್ಟಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕಲಾಮ್ ನನ್ನು ಆಸ್ಪತ್ರೆಗೆ ದಾಖಲಿಸುವ ಮಧ್ಯೆಯೇ ಆತ ಮೃತಪಟ್ಟನೆಂದು ಮುಂಬೈನ ವಿನೋಬ ಭಾವೆ ನಗರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...