alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಎಷ್ಟು ಬೋಧನಾ ಶಿಕ್ಷಕರ ಕೊರತೆ ಇದೆ ಗೊತ್ತಾ…?

ಭಾರತದ ಕೇಂದ್ರಿಯ ವಿಶ್ವ ವಿದ್ಯಾಲಯದಲ್ಲಿ 5606 ಹಾಗೂ ಭಾರತೀಯ ತಾಂತ್ರಿಕ ಸಂಸ್ಥೆ (ಐ.ಐ.ಟಿ)ಯಲ್ಲಿ 2806 ಹುದ್ದೆಗಳು ಖಾಲಿ ಇರೋದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಭಾರತೀಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಐ.ಐ.ಇ.ಎಸ್.ಟಿ)ಯಲ್ಲಿ 1870 ಹುದ್ದೆಗಳು ಖಾಲಿ ಇದ್ದರೆ, ಇಂಡಿಯನ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ (ಐ.ಐ.ಎಮ್)ನಲ್ಲಿ 258 ಹುದ್ದೆಗಳು ಖಾಲಿ ಇರೋದಾಗಿ ತಿಳಿದು ಬಂದಿದೆ. ನಿವೃತ್ತಿ ಹಾಗೂ ಬೇರೆ ಕಾರಣಗಳಿಂದ ರಾಜೀನಾಮೆ ನೀಡಿದ ಉಪನ್ಯಾಸಕರ ಹುದ್ದೆಯನ್ನು ತುಂಬಲು ಚಿಂತಿಸಲಾಗಿದ್ದು, ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸಲಾಗುವುದು ಎಂದು ಎಚ್.ಆರ್.ಡಿ. ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಉಳಿದಂತೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ 324 ಹುದ್ದೆಗಳು ಭರ್ತಿ ಆಗಬೇಕಿವೆ. ಯೋಜನಾ ಮತ್ತು ವಾಸ್ತುಶಿಲ್ಪ ಶಾಲೆಯಲ್ಲಿ ಸಹ 96 ಉಪನ್ಯಾಸಕರ ಕೊರತೆ ಇದೆ. ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್.ಸಿ) ಬೆಂಗಳೂರಿನಲ್ಲಿ 88, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐ.ಐ.ಎಸ್.ಇ.ಆರ್.ಎಸ್)ನಲ್ಲಿ 100 ಹುದ್ದೆಗಳು ಖಾಲಿ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...