alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಫೇಸ್ ಬುಕ್ ಪೇಜ್ ನಲ್ಲೇ ಪೋಸ್ಟ್ ಆಗಿತ್ತು ಆ ವಿಡಿಯೋ

hyderabad-cop-bribeಹೈದರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಹೀಗಾಗಲೇ ಈ ವಿಡಿಯೋವನ್ನು 500,000 ಮಂದಿ ವೀಕ್ಷಿಸಿದ್ದಾರಲ್ಲದೇ 10 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದ್ದ ಟ್ರಾಫಿಕ್ ಪೊಲೀಸನ ಕೆಲಸಕ್ಕೂ ಈಗ ಕುತ್ತು ಬಂದಿದೆ.

ಹೈದರಾಬಾದಿನ ಶ್ರೀಧರ್ ವೇಮುಲಾ ಎಂಬವರು ಕಳೆದ ಶುಕ್ರವಾರ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇದರಲ್ಲಿ ಹಿಮಾಯತ್ ನಗರದ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೇದೆಯೊಬ್ಬರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಮಧ್ಯ ವಯಸ್ಕ ವ್ಯಕ್ತಿಯನ್ನು ತಡೆದಿರುವ ದೃಶ್ಯವಿದೆ. ಬಳಿಕ ಆ ಮಧ್ಯ ವಯಸ್ಕ ವ್ಯಕ್ತಿ ತನ್ನ ಜೇಬಿನಿಂದ ಹಣ ತೆಗೆದು ಟ್ರಾಫಿಕ್ ಪೇದೆಗೆ ಲಂಚ ನೀಡಿ ಅಲ್ಲಿಂದ ತೆರಳಿದ್ದಾರೆ. ಈ ಸಂದರ್ಭದಲ್ಲಿ ಇನ್ನೂ ಮೂವರು ಟ್ರಾಫಿಕ್ ಪೊಲೀಸರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಸಹೋದ್ಯೋಗಿ ಲಂಚ ಪಡೆದಿದ್ದನ್ನು ಒಂದು ಸಾಮಾನ್ಯ ಘಟನೆ ಎಂಬಂತೆ ಪರಿಗಣಿಸಿದ್ದಾರೆ.

ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದ ಶ್ರೀಧರ್ ವೇಮುಲಾ, ಹೈದರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದು, ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಹು ಹೊತ್ತಿನ ಬಳಿಕ ಎಚ್ಚೆತ್ತುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಲಂಚ ಪಡೆದ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ವಿಡಿಯೋ ಕುರಿತು ಪರ-ವಿರೋಧದ ಚರ್ಚೆಗಳು ನಡೆದಿದ್ದು, ಲಂಚ ನೀಡಿದ ವ್ಯಕ್ತಿ ಮೇಲೂ ಕ್ರಮ ಕೈಗೊಳ್ಳಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...