alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸುದ್ದಿ: ಈ ಕಾರಣಕ್ಕೆ ಭಾರತದಲ್ಲಿ ಪ್ರತಿವರ್ಷ ಸಾವಿಗೀಡಾಗುತ್ತಿದ್ದಾರೆ 50 ಸಾವಿರಕ್ಕೂ ಅಧಿಕ ಮಕ್ಕಳು…!

ಆಂಟಿಬಯಾಟಿಕ್ ರೆಸಿಸ್ಟೆಂಟ್ ಸೋಂಕುಗಳು ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಮಕ್ಕಳು ಅಸುನೀಗುತ್ತಿದ್ದಾರೆ.

ಪ್ರತಿವರ್ಷ ಜಾಗತಿಕವಾಗಿ ಆಂಟಿಬಯಾಟಿಕ್ ರೆಸಿಸ್ಟೆನ್ಟ್ ಸೋಂಕುಗಳಿಂದ 7 ಲಕ್ಷದಷ್ಟು ಮಂದಿ ಪ್ರಾಣ ತೆರುತ್ತಿದ್ದಾರೆ. ಈ ಪೈಕಿ 58 ಸಾವಿರ ಮಂದಿ ಮಕ್ಕಳು ಭಾರತದಲ್ಲೇ ಅಸುನೀಗುತ್ತಿದ್ದಾರೆ ಎಂದು ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್ ಎಕನಾಮಿಕ್ಸ್ ಆಂಡ್ ಪಾಲಿಸಿ (ಸಿಡಿಡಿಇಪಿ) ಹೇಳಿದೆ. ವಿಶ್ವ ಆಂಟಿಬಯಾಟಿಕ್ ಅರಿವು ಸಪ್ತಾಹದ ಅಂಗವಾಗಿ ಈ ವರದಿಯನ್ನು ಅದು ನೀಡಿದೆ.

ಹೊಂದಿಕೊಳ್ಳುವಿಕೆಯಿಂದಾಗಿ ಆಂಟಿಬಯಾಟಿಕ್‌ಗಳು ಅಥವಾ ಔಷಧಿಗಳನ್ನು ತಡೆಯಲು ರೋಗಕಾರಕ ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಾಣು ಜೀವಿಗಳು ಸಾಮರ್ಥ್ಯ ಗಳಿಸಿಕೊಳ್ಳುವುದನ್ನು ಆಂಟಿಬಯಾಟಿಕ್ ರೆಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ.

ನದಿಗಳಿಗೆ ನಗರ ತ್ಯಾಜ್ಯವನ್ನು ಸಂಸ್ಕರಿಸದೆ ಸುರಿಯುವುದರಿಂದ ಆಂಟಿಬಯಾಟಿಕ್ ರೆಸಿಸ್ಟೆನ್ಸ್ ಹರಡುತ್ತಿದೆ ಎಂದು ಭಾರತ ಹಾಗೂ ಸ್ವೀಡನ್‌ನ ತಜ್ಞರ ತಂಡ ಈ ಹಿಂದೆ 2017ರಲ್ಲಿ ಕಳವಳ ವ್ಯಕ್ತಪಡಿಸಿತ್ತು.

ಸಿಡಿಡಿಇಪಿ ಸಂಶೋಧನೆ ಪ್ರಕಾರ, ಜಾಗತಿಕವಾಗಿ 2000 ದಿಂದೀಚೆಗೆ 2015ರ ತನಕ ಮಾನವರಲ್ಲಿ ಆಂಟಿಬಯಾಟಿಕ್‌ನ ಬಳಕೆ ಶೇ.65ರಷ್ಟು ಹೆಚ್ಚಿತ್ತು. ಕೆಳ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಇದರ ಪ್ರಮಾಣ ಶೇ.114ರಷ್ಟು ಹೆಚ್ಚಿತ್ತು.

“ಭಾರತದಲ್ಲಿ ಗರಿಷ್ಠ ಶೇ.103ರಷ್ಟು ಬಳಕೆ ಏರಿಕೆ ಕಂಡಿತ್ತು. ಇದರಿಂದಾಗಿ ಪರಿಣಾಮಕಾರಿ ಆಂಟಿಬಯಾಟಿಕ್‌ಗಳ ಕೊರತೆಯ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ” ಎಂದು ಸಿಡಿಡಿಇಪಿಯ ದಕ್ಷಿಣ ಏಷ್ಯಾ ಮುಖ್ಯಸ್ಥೆ ಜ್ಯೋತಿ ಜೋಷಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...