alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳುವ ಸುದ್ದಿ: ಹೆಚ್‌ಐವಿ ಪೀಡಿತರಲ್ಲಿ ಮಹಿಳೆಯರದ್ದೇ ಮೇಲುಗೈ !!

HIV-India-Nationalturk-29

ಇತ್ತೀಚೆಗೆ ದೇಶದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬುದು ಎಲ್ಲರಿಗೂ ಗೊತ್ತು. ಎಷ್ಟೇ ಕಠಿಣ ಕಾನೂನುಗಳನ್ನು ತಂದರೂ ಜನ ಬದಲಾಗದಿದ್ದರೆ ವ್ಯವಸ್ಥೆ ಸರಿದಾರಿಗೆ ತರಲು ಸಾಧ್ಯವೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಹೆಚ್‌ಐವಿ ಸೋಂಕು ಪೀಡಿತರಲ್ಲಿ ಶೇ.40 ಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದಾರೆ ಎಂಬ ಆಘಾತಕಾರಿ ಅಂಶವೊಂದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಹೌದು. ಒಂದೆಡೆ 2030 ರ ವೇಳೆಗೆ ಭಾರತದಿಂದ ಏಡ್ಸ್ ಎಂಬ ಮಾರಕ ರೋಗವನ್ನು ತೊಲಗಿಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ನಡುವೆಯೇ ದೇಶದಲ್ಲಿನ ಲೈಂಗಿಕ ಕಾರ್ಯಕರ್ತರು, ಅವಿದ್ಯಾವಂತ ಮತ್ತು ಗರ್ಭಿಣಿಯರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ ಎಂಬ ಅಂಶವನ್ನು ಸಮೀಕ್ಷೆ ತೆರೆದಿಟ್ಟಿದೆ.

ನಗರ ಮತ್ತು ಹಳ್ಳಿಯಲ್ಲಿರುವ ಮಹಿಳೆಯರು ಹೆಚ್‌ಐವಿ ಪರೀಕ್ಷೆಗೊಳಗಾಗಲು ಹಿಂಜರಿಯುತ್ತಿರುವುದು ಇದಕ್ಕೆ ಒಂದು ಪ್ರಮುಖ ಕಾರಣವಾದರೆ ಅಸುರಕ್ಷಿತ ಲೈಂಗಿಕ ಕ್ರಿಯೆ ಹೆಚ್ಚುತ್ತಿರುವುದು ಈ ಹೆಚ್‌ಐವಿ ಸೋಂಕು ಹರಡಲು ಮತ್ತೊಂದು ಪ್ರಮುಖ ಅಂಶ ಎನ್ನಲಾಗಿದೆ.

ಖುಷಿಯ ವಿಚಾರವೆಂದರೆ ಕಳೆದ 5 ವರ್ಷಗಳಿಂದೀಚೆಗೆ ಹೆಚ್‌ಐವಿ ಪ್ರಕರಣಗಳಲ್ಲಿ ಶೇ.66 ರಷ್ಟು ಇಳಿಕೆ ಕಂಡು ಬಂದಿದ್ದು, 2007ರಲ್ಲಿ ಹೆಚ್‌ಐವಿ ಬಾಧಿತರ ಸಂಖ್ಯೆ 22.26 ಲಕ್ಷ ಇದ್ದದ್ದು 2015 ರಲ್ಲಿ 21.17 ಲಕ್ಷಕ್ಕೆ ಕುಸಿದಿರುವುದು ಸ್ವಲ್ಪ ಮಟ್ಟಿಗೆ ಜನರಲ್ಲಿ ಜಾಗೃತಿ ಮೂಡಿದೆ ಎನ್ನಬಹುದಾಗಿದೆ. ಆದರೂ ಸಹ ಯುವತಿಯರು ಹಾಗೂ ಮಹಿಳೆಯರು ಈ ವಿಷಯದಲ್ಲಿ ಹೆಚ್ಚಿನ ಲಕ್ಷ್ಯ ವಹಿಸುವ ಅಗತ್ಯ ಇದೆ ಎಂಬ ಅಭಿಪ್ರಾಯವನ್ನು ಸಮೀಕ್ಷೆ ವ್ಯಕ್ತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...