alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಲ್ಲಿವೆ 19500 ಮಾತೃಭಾಷೆಗಳು…!

ದೇಶದಲ್ಲಿ ಸುಮಾರು 19,500 ಭಾಷೆಗಳನ್ನು ಮಾತೃಭಾಷೆಯನ್ನಾಗಿ ಬಳಸುತ್ತಿದ್ದಾರೆ.
ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, 121 ಭಾಷೆಯನ್ನು ಕೇವಲ 10 ಸಾವಿರ ಮಂದಿ ಬಳಸುತ್ತಿದ್ದಾರೆ.

121 ಕೋಟಿ ಜನರಲ್ಲಿ, 10 ಸಾವಿರ ಜನರು 121 ಭಾಷೆಯನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ ಎಂದು ತಿಳಿದು ಬಂದಿದೆ.

2011ರ ಜನಗಣತಿಯಲ್ಲಿ 19,569 ಮಾತೃಭಾಷೆಗಳನ್ನು ಗುರುತಿಸಲಾಗಿತ್ತು. ಮಾತೃಭಾಷೆಯ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.

ಮಾತನಾಡಲು ಬಳಕೆ ಮಾಡುವ ಭಾಷೆ ಹಾಗೂ ಮಾತೃಭಾಷೆಯನ್ನು ವಿಂಗಡಿಸಲಾಗಿದ್ದು ಸಮೀಕ್ಷೆಯಿಂದ ಸಿಕ್ಕಿರುವ ಮಾಹಿತಿಯ ಅನುಸಾರ 1474 ಭಾಷೆಗಳನ್ನು ಮಾತೃಭಾಷೆಯ ವಿಭಾಗದಿಂದ ಕೈಬಿಡಲಾಗಿದೆ. ಅಂತೆಯೇ ಅವನ್ನು ಅವಿಭಾಗೀಯ ಎಂದು ವರ್ಗೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...