alex Certify
ಕನ್ನಡ ದುನಿಯಾ       Mobile App
       

Kannada Duniya

ಎಎಸ್ಐ ಸಂಶೋಧಿಸಿದೆ 10000 ವರ್ಷ ಹಿಂದಿನ ಪಳೆಯುಳಿಕೆ

asi-discovered-10000-year-old-camping-site-in-ladakh

ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ಲಡಾಕ್ ನಲ್ಲಿ ಸುಮಾರು 8500 ನೇ ಇಸವಿಗಿಂತಲೂ ಹಿಂದಿನ ಕ್ಯಾಂಪಿಂಗ್ ಸೈಟ್ ಅನ್ನು ಕಂಡುಹಿಡಿದಿದೆ.

ಇದರಿಂದ ಸುಮಾರು 10,500 ವರ್ಷದ ಹಿಂದೆ ಅಲ್ಲಿ ಮನುಷ್ಯರ ಅಸ್ತಿತ್ವ ಇತ್ತೆಂಬುದು ತಿಳಿದು ಬರುತ್ತದೆ. ಈ ಕ್ಯಾಂಪಿಂಗ್ ಸೈಟ್ ನೆಲದಿಂದ ಸುಮಾರು 14ಸಾವಿರ ಅಡಿ ಎತ್ತರದಲ್ಲಿದೆ. ಈ ಸೈಟ್ ಲೇಹ್ ನಿಂದ ಲಡಾಕ್ ಗೆ ಹೋಗುವ ದಾರಿಯಲ್ಲಿದೆ ಎಂದು ಎಎಸ್ಐ ಹೇಳಿದೆ.

2015-16 ರಲ್ಲಿ ನುಬ್ರಾ ವ್ಯಾಲಿಯಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಕೆಲವು ಇದ್ದಿಲುಗಳು ಸಿಕ್ಕಿದ್ದವು. ನಂತರ ಅದನ್ನು ಫ್ಲೋರಿಡಾದ ಬೀಟಾ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅಲ್ಲಿನ ರೆಡಿಯೋಕಾರ್ಬನ್ ಟೆಸ್ಟ್ ನಿಂದ ಆ ಇದ್ದಿಲುಗಳು ಎಷ್ಟು ವರ್ಷ ಹಳೆಯದೆಂಬುದು ತಿಳಿಯಿತು ಎಂದು ಎಎಸ್ಐ ನಿರ್ದೇಶಕ ಎಸ್.ಬಿ. ಓಟಾ ಹೇಳಿದ್ದಾರೆ. ಈ ಸ್ಥಳದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುವುದರಿಂದ ಸಂಶೋಧನೆ ತುಂಬ ಕಷ್ಟ. ಆದರೂ ನಾವು ಈ ಕುರಿತು ಹೆಚ್ಚಿನ ಸಂಶೊಧನೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...