alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಘ್ರನಂತಾದ ಗೋವನ್ನು ಕಂಡು ಬೆಚ್ಚಿಬಿದ್ದ ಜನ

cow-surat

ಸೂರತ್: ಸಿಟ್ಟಿಗೆದ್ದ ಹಸುವೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಗುಜರಾತ್ ನ ಸೂರತ್ ಸಮೀಪದ ಕಟರಗಂನಲ್ಲಿ ನಡೆದಿದೆ.

ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹಸು ಆತನನ್ನು ಕೆಳಗೆ ಬೀಳಿಸಿ ಕೊಂಬಿನಿಂದ ತಿವಿದಿದೆ. ಆತ ಪರಾರಿಯಾಗಲು ಯತ್ನಿಸಿದರೂ ಅವಕಾಶ ಕೊಡದೇ ಸತಾಯಿಸಿದೆ.

ಇದನ್ನು ಕಂಡವರು ಹಸುವನ್ನು ಓಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅದರ ಮೇಲೆ ಮೇಲಿನಿಂದ ನೀರು ಹಾಕಿ, ಕೋಲಿನಿಂದ ಹೊಡೆಯಲು ಅಲ್ಲಿದ್ದವರು ಮುಂದಾಗಿದ್ದು, ಅವರನ್ನೇ ಹಸು ಅಟ್ಟಿಸಿಕೊಂಡು ಬಂದಿದೆ.

ಹಸುವಿನ ಅಟ್ಟಹಾಸಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಕೊನೆಗೆ ಸಿಟ್ಟು ಶಮನವಾದ ಬಳಿಕ ಹಸು ಅಲ್ಲಿಂದ ತೆರಳಿದ್ದು, ದಾಳಿಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...