alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಸ್ನೇಹಿತನನ್ನು ಭೇಟಿಯಾಗಲು ಹೋದ ಯುವತಿ ಮೇಲೆ ರೇಪ್

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪರಿಚಿತನಾಗಿದ್ದ ಅಪ್ರಾಪ್ತನನ್ನು ಭೇಟಿಯಾಗಲು ಹೋಗಿದ್ದ 19 ವರ್ಷದ ಯುವತಿ ಮೇಲೆ ಅಪರಿಚಿತನೊಬ್ಬ ಅತ್ಯಾಚಾರವೆಸಗಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಶುಕ್ರವಾರ ಸಂಜೆ ಈ ಯುವತಿ ತನ್ನ ಫೇಸ್ಬುಕ್ ಸ್ನೇಹಿತನನ್ನು ಪ್ರಥಮವಾಗಿ ಭೇಟಿಯಾಗಲು ಘಾಜಿಪುರಕ್ಕೆ ತೆರಳಿದ್ದು, ಅಲ್ಲಿನ ನಿರ್ಜನ ಪ್ರದೇಶದಲ್ಲಿ ಮಾತನಾಡುವಾಗ 50 ರ ಆಸುಪಾಸಿನ ಅಪರಿಚಿತ ವ್ಯಕ್ತಿಯೊಬ್ಬ ಎಂಟ್ರಿ ಕೊಟ್ಟಿದ್ದಾನೆ.

ಯುವತಿ ಹಾಗೂ ಅಪ್ರಾಪ್ತ, ನಿರ್ಜನ ಪ್ರದೇಶದಲ್ಲಿ ಇರುವುದಕ್ಕೆ ಆಕ್ಷೇಪಿಸಿದ ಅಪರಿಚಿತ ವ್ಯಕ್ತಿ ಅಪ್ರಾಪ್ತನನ್ನು ಹೆದರಿಸಿ ಓಡಿಸಿದ್ದು, ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಆತನ ಕೈ ಬೆರಳು ಕಚ್ಚಿ ತಪ್ಪಿಸಿಕೊಂಡು ಬಂದ ಯುವತಿ ಶನಿವಾರದಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...