alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬಕ್ಕೆ ಕೇಕ್ ತರಲು ಹೋದವನು ಮರಳಿದ್ದು ಶವವಾಗಿ

muzaffarnagar-man-shot-dead-by-inlaws-tv-shot-650_650x400_51500395085

ಮಗನ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಕೇಕ್ ತರಲು ಹೋದ ವ್ಯಕ್ತಿಯೊಬ್ಬ ಶವವಾಗಿ ಮನೆಗೆ ಮರಳಿದ್ದಾನೆ. ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ನಜೀಮ್ ಅಹ್ಮದ್ ಹತ್ಯೆಯಾದ ವ್ಯಕ್ತಿ. ಆತನ ಮಾವನ ಮನೆಯವರೇ ಈ ಕೃತ್ಯ ಎಸಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

ತನ್ನ ಸಹೋದರ ಹಾಗೂ ತಂದೆಯೇ ನಜೀಮ್ ನನ್ನು ಕೊಲೆ ಮಾಡಿದ್ದಾರೆ ಅಂತಾ ಪತ್ನಿ ಆಯೇಶಾ ಆರೋಪಿಸಿದ್ದಾಳೆ. ನಜೀಮ್ ಅಹ್ಮದ್ ಹಾಗೂ ಆಯೇಶಾ ಶಾಲಾ ದಿನಗಳಿಂದ್ಲೇ ಪರಸ್ಪರ ಪ್ರೀತಿಸ್ತಾ ಇದ್ರು. ಆದ್ರೆ ಬೇರೊಬ್ಬನನ್ನು ಮದುವೆ ಆಗುವಂತೆ ಹೆತ್ತವರು ಆಯೇಶಾಗೆ ಒತ್ತಾಯಿಸಿದ್ರು. ಒಪ್ಪದೇ ಇದ್ದಾಗ ಅವಳನ್ನು ಥಳಿಸಿ ಹಿಂಸಿಸಿದ್ದರು.

ಮನೆಯವರ ವಿರೋಧದ ನಡುವೆಯೇ 2015ರಲ್ಲಿ ಆಯೇಶಾ ಹಾಗೂ ನಜೀಮ್ ಮದುವೆಯಾಗಿದ್ದರು. ಆಂಧ್ರದ ವಿಶಾಖಪಟ್ಟಣಂಗೆ ಹೋಗಿ ನೆಲೆಸಿದ್ರು. ವಿವಾಹದ ನಂತರ ಇದೇ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಮರಳಿದ್ದ ದಂಪತಿ, ಮಗನ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಲು ನಿರ್ಧರಿಸಿದ್ರು.

ಚಿಕ್ಕಪ್ಪ ನಜರ್ ಅಹ್ಮದ್ ಜೊತೆಗೆ ನಜೀಮ್ ಕೇಕ್ ತರಲು ತೆರಳಿದ್ದ. ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಕೇಕ್ ಖರೀದಿಸಿ ಇಬ್ಬರೂ ಮನೆಯತ್ತ ಬರುತ್ತಿದ್ರು. ಈ ವೇಳೆ ನಾಲ್ವರು ನಜೀಮ್ ಮೇಲೆ ದಾಳಿ ಮಾಡಿದ್ದಾರೆ. ಗುಂಡು ಹಾರಿಸಿ ನಜೀಮ್ ನನ್ನು ಕೊಂದು ಅಲ್ಲಿಂದ ಪರಾರಿಯಾಗಿದ್ದಾರೆ. ಆಯೇಶಾ ತಂದೆ ರಾಜೇಶ್ ಹಾಗೂ ಸಹೋದರ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...