alex Certify
ಕನ್ನಡ ದುನಿಯಾ       Mobile App
       

Kannada Duniya

ನೋಂದಣಿಗೂ ಮುನ್ನವೇ ಅಪಘಾತಕ್ಕೀಡಾಯ್ತು 7 ಕೋಟಿ ರೂ. ಮೌಲ್ಯದ ಕಾರು

ಹೊಸ ಕಾರೊಂದು ನೋಂದಣಿಗೆ ಮುನ್ನವೇ ಅಪಘಾತವಾದರೆ ಮಾಲಿಕನಿಗೆ ಹೇಗಾಗುವುದು?ಆತನ ಬೇಸರ ಊಹಿಸುವುದೂ ಕಷ್ಟ. ಅದರಲ್ಲೂ, ಐಷಾರಾಮಿ ಕಾರುಗಳಿಗೆ ಈ ರೀತಿ ಆದಲ್ಲಿ, ಮಾಲೀಕನಿಗೆ ಸಂಕಟವಾಗುವುದರ ಜತೆಗೆ ದೊಡ್ಡ ಪ್ರಮಾಣದ ಹಣವನ್ನೂ ರಿಪೇರಿಗಾಗಿ ವ್ಯಯಿಸಬೇಕಾಗುತ್ತದೆ. ಮುಂಬಯಿನ ಜುಹುನಲ್ಲಿ ಇಂತಹುದ್ದೇ ಘಟನೆ ನಡೆದಿದೆ.

7 ಕೋಟಿ ರೂ. ಬೆಲೆಯ ಐಷಾರಾಮಿ ರೋಲ್ಸ್‌ ರಾಯ್ಸ್‌ ಗೋಸ್ಟ್‌ ಕಾರು ತನ್ನ ಮೊದಲ ಡ್ರೈವ್‌ನಲ್ಲೇ ಫುಟ್‌ಪಾತ್‌ಗೆ ಅಪ್ಪಳಿಸಿದೆ. ಪರಿಣಾಮವಾಗಿ ಎದುರಿನ ಕೆಳಗಿನ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇಷ್ಟು ಮಾತ್ರ ಸಾಲದೆಂದು, ಕಾರನ್ನು ಟೋ ಮಾಡುವ ವೇಳೆ ಕ್ರೇನ್‌ನವನೂ ಎಡವಟ್ಟು ಮಾಡಿದ್ದಾನೆ. ಕ್ರೇನ್‌ನಿಂದ ಎತ್ತಿದ ರಭಸಕ್ಕೆ ಕಾರು ಒಂದು ಭಾಗಕ್ಕೆ ವಾಲಿದೆ. ಬಳಿಕ ಹತ್ತಿರದಲ್ಲಿದ್ದ ಸ್ಥಳೀಯರ ಸಹಾಯದೊಂದಿಗೆ ಕಾರನ್ನು ಟೋ ವಾಹನಕ್ಕೆ ಏರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...