alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಶಾಸಕನ ಪುತ್ರಿಯೊಂದಿಗೆ ಫೂಲನ್ ದೇವಿ ಹತ್ಯೆ ಆರೋಪಿಯ ಮದುವೆ

ಸಮಾಜವಾದಿ ಪಕ್ಷದ ಸಂಸದೆ ಹಾಗೂ ಡಕಾಯಿತ ರಾಣಿ ಫೂಲನ್ ದೇವಿ ಹತ್ಯೆಯ ಪ್ರಮುಖ ಆರೋಪಿ ಶೇರ್ ಸಿಂಗ್ ರಾಣಾ ಮದುವೆಯಾಗಿದ್ದಾರೆ. ಉತ್ತರಾಖಂಡ್ ನ ರೂಕ್ರೀ ಎಂಬಲ್ಲಿ ಮಧ್ಯಪ್ರದೇಶದ ಮಾಜಿ ಶಾಸಕರ ಪುತ್ರಿಯ ಜೊತೆಗೆ ಶೇರ್ ಸಿಂಗ್ ವಿವಾಹ ನೆರವೇರಿದೆ.

41 ವರ್ಷದ ರಾಣಾ ಸದ್ಯ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾನೆ. 32 ವರ್ಷದ ಪ್ರತಿಮಾ ಸಿಂಗ್ ಳನ್ನು ವರಿಸಿರೋ ರಾಣಾ ತನ್ನ ಹಣೆಬರಹ ದೇವರ ಕೈಯ್ಯಲ್ಲಿದೆ ಅಂತಾ ಹೇಳಿದ್ದಾನೆ. ರಾಣಾಗೆ ಹೆಣ್ಣುಕೊಟ್ಟಿರೋ ಮಾವ 2008ರಲ್ಲಿ ಮಧ್ಯಪ್ರದೇಶದಲ್ಲಿ ಬಿಎಸ್ಪಿಯಿಂದ ಗೆಲುವು ಸಾಧಿಸಿದ್ದರು.

2001ರ ಜುಲೈ 25ರಂದು ದೆಹಲಿಯ ನಿವಾಸದಲ್ಲೇ ಫೂಲನ್ ದೇವಿಯ ಹತ್ಯೆಯಾಗಿತ್ತು. 1981ರಲ್ಲಿ ಠಾಕೂರ್ ಗಳನ್ನು ಕೊಂದಿದ್ದರಿಂದ ಫೂಲನ್ ದೇವಿ ಮೇಲೆ ಸೇಡು ತೀರಿಸಿಕೊಳ್ಳಲು ತಾನೇ ಅವಳನ್ನು ಕೊಲೆ ಮಾಡಿರುವುದಾಗಿ ರಾಣಾ ಹೇಳಿಕೊಂಡಿದ್ದ. 2 ದಿನಗಳ ನಂತರ ಪೊಲೀಸರಿಗೆ ಶರಣಾಗಿದ್ದ.

2004ರಲ್ಲಿ ಆತ ತಿಹಾರ್ ಜೈಲಿನಿಂದ ಪರಾರಿಯಾಗಿದ್ದ. ನಂತರ 2006ರಲ್ಲಿ ಕೋಲ್ಕತ್ತಾದ ಗೆಸ್ಟ್ ಹೌಸ್ ಒಂದರಲ್ಲಿ ಅವನನ್ನು ಪೊಲೀಸರು ಬಂಧಿಸಿದ್ದರು. ಫೂಲನ್ ದೇವಿ ಹತ್ಯೆ ಕೇಸ್ ನಲ್ಲಿ ರಾಣಾ ಅಪರಾಧಿಯೆಂದು 2014ರಲ್ಲಿ ದೆಹಲಿ ಕೋರ್ಟ್ ತೀರ್ಪು ನೀಡಿತ್ತು.

ಅದನ್ನು ಪ್ರಶ್ನಿಸಿ ರಾಣಾ ಹೈಕೋರ್ಟ್ ಮೆಟ್ಟಿಲೇರಿದ್ದ. 2016ರಲ್ಲಿ ಆತನಿಗೆ ಜಾಮೀನು ಕೂಡ ಸಿಕ್ಕಿತ್ತು. 2012ರಲ್ಲಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಣಾ ರಾಜಕೀಯ ಸೇರುವ ಪ್ರಯತ್ನವನ್ನೂ ಮಾಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...