alex Certify
ಕನ್ನಡ ದುನಿಯಾ       Mobile App
       

Kannada Duniya

‘ದೇವರೇ ಕಾಪಾಡುತ್ತಾನೆ ಎಂಬ ನಂಬಿಕೆ ನಿಜವಾಯ್ತು’

ಏಳು ತಿಂಗಳ ಪುಟ್ಟ ಮಗುವನ್ನು ಕರೆದುಕೊಂಡು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಮುಂದಾಗಿದ್ದ ದಂಪತಿಗೆ ಒಂದೇ ನಂಬಿಕೆ, ದೇವರು ಇದ್ದಾನೆ ಯಾವುದೋ ರೀತಿಯಲ್ಲಿ ಸಹಾಯ ಮಾಡುತ್ತಾನೆ ಎಂಬ ವಿಶ್ವಾಸ.

ಕೇರಳದ ಮೆಪ್ರಲ್ ನಲ್ಲಿ ಆಗಸ್ಟ್ 16 ರಂದು ಬೆಳಗ್ಗೆ ಎದ್ದಾಗ ಎಲ್ಲಿ ನೋಡಿದ್ರೂ ನೀರು ಆವರಿಸಿತ್ತು. ಮನೆಯ ಸುತ್ತಲೂ ನೀರು….ಇದು ಪ್ರವಾಹದ ಮುನ್ಸೂಚನೆ ಎಂದು ತಿಳಿದು ಮೊಬೀನ್ ತಮ್ಮ ಏಳು ತಿಂಗಳ ಮಗು ಹಾಗೂ ಪತಿಯ ಜೊತೆ ಸಂಬಂಧಿಕರ ಮನೆಗೆ ಹೊರಟರು.

ರಸ್ತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗ್ತಾ ಇದ್ರೆ, ಸೊಂಟದವರೆಗೂ ನೀರು ತುಂಬಿತ್ತು. ಧೃತಿಗೆಡದ ದಂಪತಿ ದೇವರು ಇದ್ದಾನೆ ಎಂಬ ನಂಬಿಕೆಯಲ್ಲಿಯೇ ನಡೆದರು. ಒಂದು ಕಿಲೋ ಮೀಟರ್ ನಷ್ಟು ದೂರ ಕ್ರಮಿಸುತ್ತಿದಂತೆ ಇಬ್ಬರು ಪುಟ್ಟ ದೋಣಿಯೊಂದಿಗೆ ಪ್ರತ್ಯಕ್ಷರಾದ್ರು. ಅಲ್ಲದೆ ಅವರು ದಂಪತಿಗೆ ಸಹಾಯ ಮಾಡೋದಾಗಿ ತಿಳಿಸಿದ್ರು.

ದಂಪತಿ ತಿರುವಲ್ಲಾನಲ್ಲಿನ ತಮ್ಮ ಸಂಬಂಧಿ ಮನೆಗೆ ಹೋಗುವ ತೀರ್ಮಾನವನ್ನು ಮಾಡಿಕೊಂಡಿದ್ದರು. ಐದು ಕಿಲೋ ಮೀಟರ್ ದೂರ ಕ್ರಮಿಸಬೇಕಿತ್ತು. ಪ್ರಸ್ತುತ ಸ್ಥಿತಿಯಲ್ಲಿ ಎಲ್ಲರೂ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ ಎನ್ನೋದನ್ನು ಅರಿತು, ಚಿಕ್ಕ ದೋಣಿ ನೂಕುತ್ತಾ ರಸ್ತೆ ಮುಟ್ಟಿದ್ರು.

ದೇವರಂತೆ ಬಂದ ಮನುಷ್ಯರಿಗೆ ಕೃತಜ್ಞತೆ ತಿಳಿಸಿ, ಮುಂದಿನ ಪ್ರಯಾಣದತ್ತ ದಂಪತಿ ಹೆಜ್ಜೆ ಹಾಕಿದ್ದಾರೆ. ಸದ್ಯ ಕುಟುಂಬ ಸುರಕ್ಷಿತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...