alex Certify
ಕನ್ನಡ ದುನಿಯಾ       Mobile App
       

Kannada Duniya

1 ಕೋಟಿಗಾಗಿ ಕರ್ತವ್ಯ ಭ್ರಷ್ಟನಾದ ಪೊಲೀಸ್ ಅಧಿಕಾರಿ

ಹಣದ ಆಸೆಗೆ ದರೋಡೆಕೋರನನ್ನು ಜೈಲಿನಿಂದ ಪೊಲೀಸ್ ಅಧಿಕಾರಿಯೇ ಬಿಟ್ಟು ಕಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತನಿಖೆಗೆ ಆದೇಶಿಸಿದೆ. ಲಖ್ನೋನ ಐಜಿಪಿ ವಿರುದ್ಧ ತನಿಖೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ.

2016ರ ನವೆಂಬರ್ ನಲ್ಲಿ ಪಟಿಯಾಲದ ನಭಾ ಜೈಲಿನಲ್ಲಿ ನಡೆದ ಘಟನೆ ಇದು. ಇಬ್ಬರು ಭಯೋತ್ಪಾದಕರು ಹಾಗೂ ನಾಲ್ವರು ದರೋಡೆಕೋರರು ಪೊಲೀಸ್ ವೇಷ ಧರಿಸಿ ಜೈಲಿನಿಂದ ಎಸ್ಕೇಪ್ ಆಗಿದ್ದರು. ಜೈಲಿಗೆ ಬಂದಿದ್ದ 12 ಮಂದಿ, ಗುಂಡಿನ ಚಕಮಕಿ ನಡೆಸಿ, ತಮ್ಮೊಂದಿಗೆ 6 ಮಂದಿಯನ್ನು ಜೈಲಿನಿಂದ ಕರೆದೊಯ್ದಿದ್ದರು.

ದರೋಡೆಕೋರರನ್ನು ಜೈಲಿನಿಂದ ಎಸ್ಕೇಪ್ ಮಾಡಲು ಹಿರಿಯ ಪೊಲೀಸ್ ಅಧಿಕಾರಿಯೇ ಸಹಕರಿಸಿರೋದು ಬೆಳಕಿಗೆ ಬಂದಿತ್ತು. ಸಪ್ಟೆಂಬರ್ 10ರಂದು ಎಸ್ ಟಿ ಎಫ್ ಆರೋಪಿ ಗುರುಪ್ರೀತ್ ಸಿಂಗ್ ಎಂಬಾತನನ್ನು ಬಂಧಿಸಿತ್ತು. ಆದ್ರೆ ಅರೆಸ್ಟ್ ಆದ ಮರುದಿನವೇ ಆತ ಬಿಡುಗಡೆಯಾಗಿದ್ದ.

ಸ್ಥಳೀಯ ರಾಜಕಾರಣಿಯೊಬ್ಬ ಪೊಲೀಸ್ ಅಧಿಕಾರಿ ಜೊತೆಗೆ 1 ಕೋಟಿ ರೂಪಾಯಿ ಡೀಲ್ ಮಾಡಿಕೊಂಡು ಖದೀಮನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದ. ದರೋಡೆಕೋರ ಪದೇ ಪದೇ ಸಾಮಾಜಿಕ ತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಿದ್ದಾನೆ. ಪೊಲೀಸರು ಮಾತ್ರ ನಕಲಿ ಎನ್ಕೌಂಟರ್ ಮಾಡಿ ಆತನನ್ನು ಸೆರೆಹಿಡಿಯುವ ನಾಟಕವಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...