alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ಇಫ್ತಾರ್ ಕೂಟಕ್ಕೆ ಬಹುತೇಕ ವಿಪಕ್ಷ ನಾಯಕರು ಗೈರು

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದ ನಂತ್ರ ಮೊದಲ ಬಾರಿ ರಾಹುಲ್ ಗಾಂಧಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ವಿರೋಧ ಪಕ್ಷದ ನಾಯಕರಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ ನೀಡಲಾಗಿತ್ತು. ವಿರೋಧ ಪಕ್ಷದ ನಾಯಕರು ಈ ಕೂಟದಲ್ಲಿ ಪಾಲ್ಗೊಂಡು ಬಲಾಬಲ ಪ್ರದರ್ಶಿಸಲಿದ್ದಾರೆಂಬ ನಿರೀಕ್ಷೆಯಿತ್ತು. ಆದ್ರೆ ರಾಹುಲ್ ಕೂಟಕ್ಕೆ ಅನೇಕ ನಾಯಕರು ಗೈರಾಗಿದ್ದರು.

ವಿಶೇಷವೆಂದ್ರೆ ಸೋನಿಯಾ ಗಾಂಧಿ 2017 ರಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದ ಅನೇಕ ನಾಯಕರು ರಾಹುಲ್ ಇಫ್ತಾರ್ ಕೂಟದಲ್ಲಿ ಕಾಣಿಸಿಕೊಳ್ಳಲಿಲ್ಲ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಎನ್ಸಿಪಿ ಮುಖ್ಯಸ್ಥ ಶರದ್ ಪವರ್ ಕೂಡ ಕೂಟದಲ್ಲಿ ಭಾಗಿಯಾಗಿಲ್ಲ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆರ್ಎಲ್ಡಿಯ ಅಜಿತ್ ಸಿಂಗ್, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ನಿರೀಕ್ಷಿಸಿದ್ದ ಅನೇಕ ನಾಯಕರು ಇಫ್ತಾರ್ ಕೂಟಕ್ಕೆ ಗೈರಾಗಿದ್ದಾರೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಇಫ್ತಾರ್ ಕೂಟದಲ್ಲಿ ಭಾಗಿಯಾಗಿಲ್ಲ. ವಿದೇಶದಲ್ಲಿರುವ ಕಾರಣಕ್ಕೆ ಕೂಟಕ್ಕೆ ಬಂದಿಲ್ಲ ಎನ್ನಲಾಗ್ತಿದೆ. ರಾಹುಲ್ 17 ವಿಪಕ್ಷದ ನಾಯಕರನ್ನು ಕೂಟಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ. ಅದ್ರಲ್ಲಿ ಬಹುತೇಕ ನಾಯಕರು ಗೈರಾಗಿದ್ದಾರೆ. ಹಾಗಾಗಿ ರಾಹುಲ್ ಇಫ್ತಾರ್ ಕೂಡ ಯಶಸ್ವಿಯಾಯ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...