alex Certify
ಕನ್ನಡ ದುನಿಯಾ       Mobile App
       

Kannada Duniya

‘ಭಾರತ್ ಬಂದ್’ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ಇಂದು ರಾಷ್ಟ್ರ ವ್ಯಾಪಿ ಭಾರತ್ ಬಂದ್ ನಡೀತಿರೋ ಸುದ್ದಿ ಎಲ್ಲರಿಗೂ ಗೊತ್ತಿದೆ. ಅಷ್ಟಕ್ಕೂ ಬಂದ್ ಆಚರಿಸ್ತಿರೋದು ಏಕೆ…? ಅದರ ಪೂರ್ವಾಪರ ಏನು ಅನ್ನೋದ್ರ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಹೆಚ್ಚುತ್ತಿರುವ ತೈಲ ದರ ಅಂದ್ರೆ ದಿನಬಳಕೆಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆಯನ್ನ ಖಂಡಿಸಿ ವಿರೋಧ ಪಕ್ಷವಾದ ಕಾಂಗ್ರೆಸ್ ಭಾರತ್ ಬಂದ್ ಗೆ ಕರೆ ಕೊಟ್ಟಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಗಳನ್ನು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಬೇಕು ಅನ್ನೋ ಬೇಡಿಕೆಯನ್ನ ಮುಂದಿಟ್ಟುಕೊಂಡೇ ಈ ಬಂದ್ ಆಚರಿಸಲಾಗುತ್ತಿದೆ.

ಈ ಬಂದ್ ಗೆ ಜಾತ್ಯಾತೀತ ಜನತಾದಳ, ಎಂಎನ್ಎಸ್, ಆರ್ಜೆಡಿ ಸೇರಿದಂತೆ 21 ರಾಷ್ಟ್ರೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಬೆಂಗಳೂರಿನಲ್ಲಿ ಕನ್ನಡ ರಕ್ಷಣಾ ವೇದಿಕೆ ಸೇರಿದಂತೆ ಸಾಮಾಜಿಕ ಸಂಘಟನೆಗಳು ಕೂಡ ಬಂದ್ ಗೆ ಮುಂದಾಗಿವೆ. ಸಾರ್ವಜನಿಕ ಸಾರಿಗೆ ಸೇರಿದಂತೆ ಬಹುತೇಕ ಸಂಪರ್ಕ ಸಾರಿಗೆ ಸೇವೆಗಳು ಇರೋದಿಲ್ಲ. ಮಾಲ್, ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು ಬಾಗಿಲು ತೆಗೆಯೋದಿಲ್ಲ. ಅಗತ್ಯ ವಸ್ತುಗಳ ಸೇವೆ ಅಂದ್ರೆ ಔಷಧಾಲಯ, ಆಸ್ಪತ್ರೆ, ಅಂಬುಲೆನ್ಸ್ ಸೇವೆ ಲಭ್ಯವಾಗಲಿದೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ಬಂದ್ ನಡೆಯುತ್ತಿದೆ. ಬೆಳಗ್ಗೆ 6ರಿಂದ ಆರಂಭವಾಗಿರುವ ಬಂದ್ ಸಂಜೆ ಆರರವರೆಗೆ ಮುಂದವರೆಯಲಿದೆ. ಸಂಜೆ 6 ಗಂಟೆ ನಂತರದಲ್ಲಿ ಎಲ್ಲಾ ಸೇವೆಗಳು ಯಥಾಸ್ಥಿತಿಗೆ ಮರಳಲಿವೆ. ಬಂದ್ ಗೆ ಬೇಕಾದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿ ಆಯಾ ರಾಜ್ಯಗಳ ಪೊಲೀಸ್ ಇಲಾಖೆ ಮೇಲಿದೆ.

ದೇಶದ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಹಿತಕರ ಘಟನೆ ನಡೆಯದಂತೆ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್ ಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...