alex Certify
ಕನ್ನಡ ದುನಿಯಾ       Mobile App
       

Kannada Duniya

‘ಮದ್ಯ’ ಪ್ರಿಯನ ಬೇಡಿಕೆ ಕೇಳಿ ಕಂಗಾಲಾದ ಅಧಿಕಾರಿಗಳು

ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ಸಾರ್ವಜನಿಕ ಅಹವಾಲು ಪಡೆಯುತ್ತಾ ಕುಳಿತಿದ್ದ ವೇಳೆ ವಿಚಿತ್ರ ಬೇಡಿಕೆಯೊಂದು ಬಂದಿದೆ. ಸೆಂಗೊಟ್ಟಿಯನ್ ಎಂಬ ಬಡ ಕೃಷಿ ಕಾರ್ಮಿಕನೊಬ್ಬ ಅಧಿಕಾರಿಗಳ ಬಳಿ ಬಂದು ದಯಮಾಡಿ ನನ್ನ ಊರಲ್ಲಿ ಒಂದು ವೈನ್‌ ಶಾಪ್ ತೆರೆಯಿರಿ, ಆಗದೇ ಹೋದರೆ ಉಚಿತ ಬಸ್ ಪಾಸ್ ಕೊಡಿಸಿ ಎಂದು ಗೋಗರೆದಿದ್ದಾನೆ…!

ತಾನು ಕೊಡುಂಬುಡಿ ಸಮೀಪದ ವೆಲ್ಲೊಟಂ ಪರಪ್ಪು ಗ್ರಾಮದವನಾಗಿದ್ದು, ತನ್ನ ಊರಿನ ಸಮೀಪ ಎಲ್ಲೂ ವೈನ್ ಶಾಪ್ ಇಲ್ಲ. ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದರಿಂದ ಇನ್ನೂ ವೈನ್‌ ಶಾಪ್ ತೆರೆದಿಲ್ಲ. ಕೃಷಿ ಕಾರ್ಮಿಕರಿಗೆ ಪ್ರತಿದಿನ ದಣಿವಾರಿಸಿಕೊಳ್ಳಲು ಮದ್ಯ ಸೇವಿಸಬೇಕಾಗುತ್ತದೆ ಎಂದು ಅಹವಾಲಿನಲ್ಲಿ ಸೆಂಗೊಟ್ಟಿಯನ್ ಹೇಳಿಕೊಂಡಿದ್ದಾನೆ.

ಇದರಿಂದಾಗಿ ಬಡ ಕಾರ್ಮಿಕರೆಲ್ಲ ಸಮೀಪದ ಪಟ್ಟಣಕ್ಕೆ ಬಸ್‌ ನಲ್ಲಿ ಹೋಗಬೇಕಾಗಿದೆ. ಇದು ಬಡ ಕುಟುಂಬಗಳ ಮೇಲೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ತುರ್ತಾಗಿ ತನ್ನ ಗ್ರಾಮದಲ್ಲೇ ವೈನ್‌ ಶಾಪ್ ತೆರೆಯಲು ವ್ಯವಸ್ಥೆ ಮಾಡಿ ಅಥವಾ ಬಡ ಕುಡುಕರಿಗೆ ಉಚಿತ ಬಸ್ ಪಾಸ್ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

ಈ ವಿಚಿತ್ರ ಮನವಿ ನೋಡಿ ತಲೆಕೆಟ್ಟ ಜಿಲ್ಲಾಧಿಕಾರಿ ಹಾಗೂ ಕಚೇರಿಯ ಸಿಬ್ಬಂದಿ, ಆಯ್ತಪ್ಪ ಸಂಬಂಧಪಟ್ಟ ಇಲಾಖೆಗೆ ಇದನ್ನು ಕಳಿಸಿಕೊಡ್ತೇವೆ ಅಂತ ಭರವಸೆ ನೀಡಿ ಆತನನ್ನು ಸಾಗ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...