alex Certify
ಕನ್ನಡ ದುನಿಯಾ       Mobile App
       

Kannada Duniya

ಖಾಲಿ ಜಾಗದಲ್ಲಿ ಪತ್ತೆಯಾಯ್ತಾ ನವಜಾತ ಶಿಶುಗಳ ಮೃತದೇಹ..?

ಕೋಲ್ಕತ್ತಾದಲ್ಲಿ ಇದ್ದಕ್ಕಿದ್ದ ಹಾಗೆ ಆತಂಕವೊಂದು ಸೃಷ್ಟಿಯಾಗಿದೆ. ಕೋಲ್ಕತ್ತಾದ ದಕ್ಷಿಣ ಭಾಗದ ಖಾಲಿ ನಿವೇಶನ ಒಂದರಲ್ಲಿ ಬೆಳೆದಿರುವಂತಾ ಪೊದೆಯಲ್ಲಿ 14 ನವಜಾತ ಶಿಶುಗಳ ದೇಹ ಪತ್ತೆಯಾಗಿದೆ ಅಂತ ಮೇಯರ್ ಘೋಷಿಸಿದ್ದಾರೆ. ಆನಂತರದಲ್ಲಿ ಈ ವಿಚಾರದ ಬಗ್ಗೆ ಪೊಲೀಸರು ಮತ್ತು ಮೇಯರ್ ಹೇಳಿಕೆ ನಡುವೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ಸಿಕ್ಕಿರುವಂತಾ ವಸ್ತುವನ್ನು ಪೊಲೀಸರು ವೈದ್ಯಕೀಯ ತ್ಯಾಜ್ಯ ಇರಬಹುದು ಅಂತ ಹೇಳ್ತಿದ್ದಾರೆ.

ಹಾಗಾಗಿಯೇ ಪೊಲೀಸರು ಸ್ಥಳಕ್ಕೆ ವೈದ್ಯರನ್ನು ಕರೆಸಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿದ್ದದ್ದು ವೈದ್ಯಕೀಯ ತ್ಯಾಜ್ಯ ಅನ್ನೋ ಅಭಿಪ್ರಾಯವನ್ನು ಅವರು ಕೂಡ ವ್ಯಕ್ತಪಡಿಸಿದ್ದಾರೆ. ಆದ್ರೆ ವೈದ್ಯಕೀಯ ಪರೀಕ್ಷೆ ಬಳಿಕವೇ ಗೊಂದಲ ಬಗೆ ಹರಿಯಲಿದೆ ಅಂತ ಹರಿದೇವ್ಪುರದ ಡಿಸಿಪಿ ನೀಲಾಂಜನ್ ಬಿಸ್ವಾಸ್ ಹೇಳ್ತಿದ್ದಾರೆ.

ಹಾಗಾಗಿಯೇ ಪ್ಲಾಸ್ಟಿಕ್ ಚೀಲದಲ್ಲಿ ಸಿಕ್ಕಂತಾ ವಸ್ತುಗಳ ಸ್ಯಾಂಪಲ್ ಗಳನ್ನ ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಹಾಗೆಯೇ ಮರಣೋತ್ತರ ಪರೀಕ್ಷಾ ಘಟಕಕ್ಕೂ ಸಿಕ್ಕಂತಾ ಪ್ಲಾಸ್ಟಿಕ್ ಬ್ಯಾಗ್ ಗಳನ್ನ ಕಳುಹಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವೇ ಅಸಲಿ ವಿಚಾರ ಏನು ಅನ್ನೋದು ಗೊತ್ತಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...