alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎನ್‌.ಜಿ.ಯೇತರ ವಾಹನಗಳಿಗೆ ನಿಷೇಧ…?

ವಾಯು ಮಾಲಿನ್ಯದಿಂದ ಹದಗೆಟ್ಟಿರುವ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಸುಧಾರಿಸಲು ಸಿಎನ್‌ಜಿಯೇತರ ವಾಹನಗಳನ್ನು ಸಂಪೂರ್ಣವಾಗಿ ನಿಷೇಧ ಹೇರುವ ಸಾಧ್ಯತೆಯಿದೆ.

ದೆಹಲಿಯ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ತಾನು ಸಿಎನ್‌ಜಿಯೇತರ ಖಾಸಗಿ ವಾಹನಗಳ ಮೇಲೆ ನಿರ್ಬಂಧ ವಿಧಿಸುವ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್‌ನಿಂದ ನೇಮಿಸಲ್ಪಟ್ಟ ಪರಿಸರ ರಕ್ಷಣಾ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಎಚ್ಚರಿಕೆ ನೀಡಿದೆ.

ದೆಹಲಿ, ಹರ್ಯಾಣ ಹಾಗೂ ಉತ್ತರಪ್ರದೇಶ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಇಪಿಸಿಎ ಅಧ್ಯಕ್ಷ ಭುರೆ ಲಾಲ್, ವಾಹನಗಳಲ್ಲಿ ಸ್ಟಿಕರ್ ಹಾಕುವ ನಿಯಮ ಅನುಷ್ಠಾನವಾಗಿಲ್ಲ. ಇದರಿಂದಾಗಿ ಡೀಸೆಲ್ ಹಾಗೂ ಇತರೆ ಇಂಧನದ ವಾಹನಗಳನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ರಾಜಧಾನಿಯ ವಾಯು ಗುಣಮಟ್ಟ ಹೀಗೆ ಕಳಪೆಯಾಗಿ ಮುಂದುವರಿದರೆ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿದ್ದಾರೆ.

ಸಿಎನ್‌ಜಿ ವಾಹನಗಳಲ್ಲಿ ಸ್ಟಿಕರ್ ಇದೆ ಹಾಗೂ ದೆಹಲಿಯ ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳು ಸಿಎನ್‌ಜಿಯಿಂದಲೇ ಚಾಲಿತಗೊಂಡಿವೆ. ಲಾಲ್ ಅವರು ಮಾಲಿನ್ಯಕಾರಕ ವಾಹನಗಳ ವಿರುದ್ಧ ಆಕ್ಷೇಪ ಎತ್ತಿರುವುದು ಇದು ಎರಡನೇ ಬಾರಿ. ಅ.31 ರಂದು ಎಲ್ಲಾ ಖಾಸಗಿ ವಾಹನಗಳನ್ನು ನಿಷೇಧಿಸುವ ಪ್ರಸ್ತಾಪ ಇರಿಸಿದ್ದರು. ಈ ಬಾರಿ ಸ್ಪಷ್ಟವಾಗಿ ಸಿಎನ್‌ಜಿಯೇತರ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...